Monday, July 13, 2026
Homeಕ್ರೈಮ್ಕಾಫಿನಾಡು ಚಿಕ್ಕಮಗಳೂರಿನ ಪ್ರವಾಸಿಗರಿಗೆ ಹೊಸ ರೂಲ್ಸ್: ಹೆಚ್ಚು ಹೊತ್ತು ಮೋಜು ಮಸ್ತಿಗೆ ಜಿಲ್ಲಾಡಳಿತ ಬ್ರೇಕ್

ಕಾಫಿನಾಡು ಚಿಕ್ಕಮಗಳೂರಿನ ಪ್ರವಾಸಿಗರಿಗೆ ಹೊಸ ರೂಲ್ಸ್: ಹೆಚ್ಚು ಹೊತ್ತು ಮೋಜು ಮಸ್ತಿಗೆ ಜಿಲ್ಲಾಡಳಿತ ಬ್ರೇಕ್

Telegram Group
Join Now

ಕಾಫಿನಾಡು ಚಿಕ್ಕಮಗಳೂರಿನ ಪ್ರಸಿದ್ಧ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹೊಸ ನಿಯಮ ಜಾರಿ ಮಾಡಲಾಗಿದೆ. ಮುಳ್ಳಯ್ಯನಗಿರಿ  ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಹೊಸ ರೂಲ್ಸ್ ಮಾಡಲಾಗಿದೆ. 

ಹೌದು .. ಇನ್ಮುಂದೆ ಯಾವುದೇ ಪ್ರವಾಸಿಗರು ಬಂದರೂ ಈ ರೂಲ್ಸ್‌ ಫಾಲೋ ಮಾಡಲೇಬೇಕಿದೆ ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಲಾಗಿದೆ. ಅದೇನೆಂದರೆ ಮುಳ್ಳಯ್ಯನಗಿರಿಯಲ್ಲಿ ಕಾಲ ಕಳೆಯಲು ಪ್ರವಾಸಿಗರಿಗೆ ಮೂರು ಗಂಟೆಗಳ ಸಮಯ ನಿಗದಿ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹಾಗೇ ಮುಳ್ಳಯ್ಯನಗಿರಿ ,ಸೀತಾಳಯ್ಯನಗಿರಿ ಭಾಗದಲ್ಲಿ ಅಡುಗೆ ಮಾಡುವುದು ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂದುಚಿಕ್ಕಮಗಳೂರು ಜಿಲ್ಲಾಧಿಕಾರಿ ನಾಗರಾಜ್ ವರು ಆದೇಶ ಹೊರಡಿಸಿದ್ದಾರೆ.

ಅದರಲ್ಲೂ ಈಗ ಶಾಲೆಗಳಿಗೆ ರಜೆ ಇರುವುರಿದ ಪೋಷಕರು ಮಕ್ಕಳ ಸಮೇತ ಪ್ರವಾಸಕ್ಕೆ ಆಗಮಿಸುತ್ತಾರೆ. ಹೀಗಾಗಿ ಮತ್ತಷ್ಟು ಜನ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿವೆ. ಹಾಗೇ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕ ಘಟನೆಗಳು ನಡೆಯದಂತೆ, ಅಲ್ಲದೇ ಹೆಚ್ಚು ಹೊತ್ತು ಮೋಜು ಮಸ್ತಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments