Tuesday, July 14, 2026
Homeಕ್ರೈಮ್ಚಿಕ್ಕಮಗಳೂರು: ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣು!

ಚಿಕ್ಕಮಗಳೂರು: ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣು!

Telegram Group
Join Now

ಚಿಕ್ಕಮಗಳೂರು: ಮನೆಯಲ್ಲಿ ಮದುವೆ ಮಾಡಲಿಲ್ಲ, ಮದುವೆಗೆ ಹೆಣ್ಣು ಸಿಗಲಿಲ್ಲ ಅಂತ ಮನನೊಂದು 26 ವರ್ಷದ ಕುರಿಗಾಯಿ ಯುವಕ ತೆಂಗಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿ ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನ ಕುಮಾರ್ ಎಂದು ಗುರುತಿಸಲಾಗಿದೆ. ಮೃತ ಕುಮಾರ್ ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬ್ರಹ್ಮಸಂದ್ರ ಮೂಲದ ಯುವಕ. ತನ್ನ ಪೋಷಕರ ಜೊತೆ ಶಿರಾದಿಂದ ಬಂದು ಕಡೂರು ತಾಲೂಕಿನ ಬಾಸೂರು ಬಳಿ ವಾಸವಿದ್ದು ಹಳ್ಳಿ-ಹಳ್ಳಿಗಳ ಮೇಲೆ ಹೋಗಿ ತೋಟದಲ್ಲಿ ಗೊಬ್ಬರಕ್ಕಾಗಿ ಕುರಿಮಂದೆಯನ್ನ ತೋಟದೊಳಗೆ ನಿಲ್ಲಿಸಿ ಹಣ ಪಡೆಯುತ್ತಿದ್ದರು.

ಮೃತ ಕುಮಾರ್ ಪೋಷಕರಿಗೆ ಮೂವರು ಗಂಡು ಮಕ್ಕಳು. ಯಾರಿಗೂ ಮದುವೆಯಾಗಿರಲಿಲ್ಲ. ಮೃತ ಕುಮಾರ್ ಪೋಷಕರ ಬಳಿ ಮದುವೆ ಮಾಡುವಂತೆ ಕೇಳುತ್ತಿದ್ದ. ಆದರೆ, ಪೋಷಕರು ನಿನ್ನ ಅಣ್ಣಂದಿರಿಗೆ ಮದುವೆಗೆ ಆಗಿಲ್ಲ. ಹುಡುಗಿ ಸಿಗುತ್ತಿಲ್ಲ. ಅವರಿಗೆ ಆದ ಮೇಲೆ ನಿನಗೆ ಮಾಡುತ್ತೇವೆ. ಇಲ್ಲ ಅವನ ಜೊತೆಯೇ ಒಟ್ಟಿಗೆ ಮದುವೆ ಮಾಡುತ್ತೇವೆ‌ ಎಂದಿದ್ದರು.

ಅದೇ ಬೇಜಾರಿನಲ್ಲಿ ಕುಮಾರ್ ಮದ್ಯ ಸೇವಿಸುತ್ತಿದ್ದ, ಬಳಿಕ ಮನನೊಂದು ತೆಂಗಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಯಗಟಿ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಆದರೆ, ಮೃತ ಕುಮಾರ್ ಸಾವಿಗೆ ಕಾರಣ ಮದ್ಯ ಸೇವನೆಯೋ ಅಥವ ಹೆಣ್ಣು ಸಿಗದಿರೋದೋ ಸ್ಪಷ್ಟವಾಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments