ಈತನ ಎದೆಯೊಳಗೆ ಇರುವುದು ಸಾಮಾನ್ಯ ಹೃದಯವಲ್ಲ..
ರಾಜಧಾನಿಯಲ್ಲಿ ವೈದ್ಯಕೀಯ ಲೋಕದ ಅಚ್ಚರಿಯ ಸಾಧನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರಿಗೆ ಆರ್ಟಿಫಿಶಿಯಲ್ ಹಾರ್ಟ್ ಅಳವಡಿಸಿ ಮರು ಜೀವ ನೀಡಿದ್ದಾರೆ. ಇತ್ತಿಚೀನ ದಿನಗಳಲ್ಲಿ ಭಾರತ ಎಲ್ಲಾ ರೀತಿಯ ಟೆಕ್ನಾಲಾಜಿಯಲ್ಲಿ ಮುಂದುವರಿಯುತ್ತಿರುವುದು ಗೊತ್ತೆ ಇದೆ.
ಅದೇ ರೀತಿ ವೈದ್ಯಕೀಯ ಲೋಕದಲ್ಲೂ ಮಹತ್ತರ ಸಾಧನೆ ಮೆರೆದಿದ್ದಾರೆ. ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ವ್ಯಕ್ತಿಯೊಬ್ಬರಿಗೆ ಕೃತಕ ಹೃದಯ ಅಳವಡಿಸುವ ಮೂಲಕ ಯಶಸ್ಸು ಕಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ಮೂಲದ ಗುರುಣ್ಣಾ ಎಂಬುವರಿಗೆ ಖ್ಯಾತ ಹೃದಯ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ಅಶ್ವಿನಿ ಪಸರದ್ ಮತ್ತು ಅವರ ತಂಡದ ಸಿಬ್ಬಂದಿಗಳು ಕೃತಕ ಹೃದಯ ಅಳವಡಿಸಿ ಸಾಧನೆ ಮಾಡಿದ್ದಾರೆ.

ಅಂಗಾಂಗ ದಾನ ಮಾತ್ರವಲ್ಲದೇ ಹೃದಯ ದಾನಕ್ಕೂ ಹೆಸರು ನೊಂದಾಸಿಕೊಳ್ಳುತ್ತಿದ್ದಾರೆ. ಇನ್ನು ಹುನಗುಂದ ಮೂಲದ ಗುರುಣ್ಣಾನವರಿಗೆ ಎಂಬುವರ ಹೃದಯ ದುರ್ಬಲವಾಗಿರುವ ಕಾರಣ 3rd ಜನರೇಶನ್ ಎಲ್ಬಿ ಕೃತಕ ಹೃದಯವನ್ನು ಅಳವಡಿಸಲಾಗಿದೆ.

ಥರ್ಡ್ ಜನರೇಶನ್ ಎಲ್ಬಿ ಎಂದರೇನು..?
ಬ್ಯಾಗ್ನಲ್ಲಿರುವ ಬ್ಯಾಟರಿಗಳು, ಎಲೆಕ್ಟ್ರಿಕ್ ಮೋಟರ್ ಮತ್ತು ಟ್ಯೂಬ್ಗಳು ಗಾಳಿಯನ್ನು ಪಂಪ್ ಮಾಡುವ ಮೂಲಕ ಹೃದಯ ಬಡಿತಕ್ಕೆ ಸಹಕಾರಿಯಾಗಿದೆ. ಇದರ ಅಳವಡಿಕೆಯಿಂದ ಹೃದಯಘಾತವನ್ನು ನಿಯಂತ್ರಿಸಬಹು ಎನ್ನಲಾಗಿದೆ.