Monday, April 13, 2026
Homeಜಿಲ್ಲಾಸುದ್ದಿಮೂಡಿಗೆರೆ: ಕಾಂಗ್ರೆಸ್ ಪಕ್ಷದ ರಾಷ್ಟೀಯ ಅಧ್ಯಕ್ಷ ಖರ್ಗೆ ಹೇಳಿಕೆಗೆ ಬಿಜೆಪಿ ಯುವ ಮೋರ್ಚಾ ತೀವ್ರ ಖಂಡನೆ

ಮೂಡಿಗೆರೆ: ಕಾಂಗ್ರೆಸ್ ಪಕ್ಷದ ರಾಷ್ಟೀಯ ಅಧ್ಯಕ್ಷ ಖರ್ಗೆ ಹೇಳಿಕೆಗೆ ಬಿಜೆಪಿ ಯುವ ಮೋರ್ಚಾ ತೀವ್ರ ಖಂಡನೆ

ಮೂಡಿಗೆರೆ:ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಷ್ಟೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಖಂಡಿಸಿದ್ದಾರೆ.

ಖರ್ಗೆ ಅಸ್ಸಾಂ ರಾಜ್ಯದ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡುವ ವೇಳೆ ಎಲುಬು ಇಲ್ಲದ ನಾಲಿಗೆಯನ್ನು ಹತೋಟಿಯಲ್ಲಿ ಇಡದೆ ಮನ ಬಂದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಬಗ್ಗೆ ಹಾಗೂ ಬಿಜೆಪಿ ಕಾರ್ಯಕರ್ತರ ಬಗ್ಗೆ ಮಾತನಾಡಿರುವುದನ್ನು ಬಿಜೆಪಿ ಯುವ ಮೋರ್ಚಾ ಸದಸ್ಯರು ಖಂಡಿಸಿದ್ದಾರೆ.

ವಿಷ ಸರ್ಪವನ್ನು ಕಂಡ ಸಂದರ್ಭದಲ್ಲಿ ಹೇಗೆ ಬಡಿಯುತ್ತೇವೆ ಹಾಗೆಯೇ ಬಿಜೆಪಿ, ಸಂಘ ಪರಿವಾರದವರನ್ನು ಬಡಿದು ಹಾಕಬೇಕು. ಕಾರ್ಯಕರ್ತರನ್ನು ಕೊಲೆ ಮಾಡಲು ಪ್ರಚೋದನೆ ಮಾಡಿದ ಖರ್ಗೆ ಅವರ ಭಾಷಣ ಇಡಿ ರಾಜಕೀಯ ಶೋಭೆ ತರುವಂತದಲ್ಲ ರಾಷ್ಟೀಯ ಪಕ್ಷದ ಉನ್ನತ ಜವಾಬ್ದಾರಿ ಯಲ್ಲಿರುವ ಖರ್ಗೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅದಲ್ಲದೆ ಮುಸ್ಲಿಂ ಮತ ಓಲೈಕೆ ಮಾಡುವ ಭರದಲ್ಲಿ ತಮ್ಮ ತನ ಕಳೆದು ಕೊಂಡಿದ್ದಾರೆ ಎಂಬುದಾಗಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತಾರೇಶ್ ಜೇನುಬೈಲ್ ಹೇಳಿದರು

ಪಬ್ಲಿಕ್ ಇಂಪ್ಯಾಕ್ಟ್ ಗೆ ಪ್ರತಿಕ್ರಿಯಿಸಿದ ಸುನಿಲ್ ಮಣ್ಣಿಕೆರೆ ಖರ್ಗೆ ಓರ್ವ ಬೇಜವಾಬ್ದಾರಿ ಮನುಷ್ಯ ಎಂಬುದು ಅವರ ವ್ಯಕ್ತಿತ್ವದಲ್ಲಿ ಕಾಣಬಹುದು , ಕಾಂಗ್ರೆಸ್ ಪಕ್ಷದ ಆಲೋಚನೆ ವ್ಯಕ್ತಿಯನ್ನು ಕೊಲ್ಲುವ ಮನಸ್ಥಿತಿ ಯಲ್ಲಿರುವುದು ನಿಜಕ್ಕೂ ವಿಷಾಧನೀಯ,

ಮುಂದೊಂದು ದಿನ ರಾಷ್ಟ್ರದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಕಗ್ಗೊಲೆಗೆ ಖರ್ಗೆ ಯ ಹಗಲು ಕನಸು ಕಾಣುತ್ತಿರುವುದು ಹಾಸ್ಯಸ್ಪದ ಎಂದರು

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಅವಿನಾಶ್,ಪವನ್ ಅಂಗಡಿ,ಬಾಲು ಶೆಟ್ಟಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!