ಜಯಪುರ : ಜಯಪುರದ ಸತ್ಯ ಸಾಯಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ನದಿ ಸ್ನಾನಕ್ಕೆ ತೆರಳಿದ ವೇಳೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಭಾನುವಾರ ನಡೆದಿದೆ.
ಅನಿಕೇತ್ (13) ಮೃತ ವಿದ್ಯಾರ್ಥಿಯಾಗಿದ್ದಾನೆ. ಪುತ್ತೂರು ಮೂಲದ ಈತ ಕಳೆದ ಎರಡು ವರ್ಷಗಳಿಂದ ಜಯಪುರದ ಸತ್ಯಸಾಯಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದೂ, ಈ ವರ್ಷ ಏಳನೇ ತರಗತಿ ಕಲಿಯುತ್ತಿದ್ದ.

ಭಾನುವಾರ ಮಧ್ಯಾಹ್ನಮೂವರು ಶಿಕ್ಷಕರು ಹಾಗೂ 20 ವಿದ್ಯಾರ್ಥಿಗಳೊಂದಿಗೆ ನದಿ ಸ್ನಾನಕ್ಕೆ ತೆರಳಿದ ಈತ ನದಿಯಲ್ಲಿ ಮುಳುಗಿದ್ದು, ಜಯಪುರದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತಾದರು ಬದುಕುಳಿಯಲಿಲ್ಲ.
ಜಯಪುರ ಪಿ ಎಸ್ ಐ ರವೀಶ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
