Tuesday, April 14, 2026
Homeಕ್ರೈಮ್ಕೊಟ್ಟಿಗೆಹಾರ: ಏಕಾಏಕಿ ಕುಸಿದು ಬಿದ್ದ ಮರ, ಮೂರು ವಿದ್ಯುತ್ ಕಂಬಗಳು ಜಖಂ: ಕೂದಲೆಳೆಯಲ್ಲಿ ಸರ್ಕಾರಿ ಬಸ್...

ಕೊಟ್ಟಿಗೆಹಾರ: ಏಕಾಏಕಿ ಕುಸಿದು ಬಿದ್ದ ಮರ, ಮೂರು ವಿದ್ಯುತ್ ಕಂಬಗಳು ಜಖಂ: ಕೂದಲೆಳೆಯಲ್ಲಿ ಸರ್ಕಾರಿ ಬಸ್ ಪಾರು

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಬಳಿ ಹೆದ್ದಾರಿ ಪಕ್ಕದಲ್ಲಿದ್ದ ಬೃಹತ್ ಮರವು ಏಕಾಏಕಿ ಕುಸಿದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ, ಮೂರು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದ ಘಟನೆ ಸೋಮವಾರ ನಡೆದಿದೆ.

ಘಟನೆ ಸಂಭವಿಸುವುದಕ್ಕೂ ಸುಮಾರು 10 ಸೆಕೆಂಡ್ ಮೊದಲು ಅದೇ ಮಾರ್ಗದಲ್ಲಿ 50–60 ಪ್ರಯಾಣಿಕರನ್ನು ಹೊತ್ತ ಸರ್ಕಾರಿ ಬಸ್ ಸಂಚರಿಸುತ್ತಿದ್ದು, ಮರ ಕುಸಿತದ ತೀವ್ರ ಅಪಾಯದಿಂದ ಬಸ್ ಮತ್ತು ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಮರ ಮತ್ತು ವಿದ್ಯುತ್ ಕಂಬಗಳು ಬಿದ್ದ ವೇಳೆ ಬಸ್ ಅಲ್ಲಿಂದ ಮುಂದಕ್ಕೆ ಸಾಗಿದ್ದರಿಂದ ದೊಡ್ಡ ದುರಂತ ತಪ್ಪಿದೆ ಎಂದು ತಿಳಿದುಬಂದಿದೆ.

ಮರ ಕುಸಿತದಿಂದ ಮೂರು ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ, ಹೆದ್ದಾರಿ ಸಂಪರ್ಕ ರಸ್ತೆ ಸಂಪೂರ್ಣವಾಗಿ ಸ್ಥಗಿತಗೊಂಡು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಕೆಲಕಾಲ ವಾಹನಗಳು ರಸ್ತೆ ಎರಡೂ ಬದಿಗಳಲ್ಲಿ ನಿಂತುಕೊಂಡು ಸಂಚಾರ ಸ್ಥಗಿತಗೊಂಡಿತ್ತು.


ಘಟನೆಯ ಮಾಹಿತಿ ತಿಳಿದು ಸ್ಥಳೀಯರು ಹಾಗೂ ಮೆಸ್ಕಾಂ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ವಿದ್ಯುತ್ ಲೈನ್‌ಗಳನ್ನು ಸುರಕ್ಷಿತವಾಗಿ ತೆರವುಗೊಳಿಸಿ, ರಸ್ತೆಗೆ ಬಿದ್ದ ಕಂಬಗಳನ್ನು ತೆರವುಗೊಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!