ಒಂದಲ್ಲ ಎರಡಲ್ಲ ಬರೋಬ್ಬರಿ 650 ಗ್ರಾಂ ಗಾಂಜಾ ಪೊಲೀಸ್ ವಶಕ್ಕೆ..!
ಮೂಡಿಗೆರೆಯಲ್ಲಿ 650 ಗ್ರಾಂ ಗಾಂಜಾ ಪತ್ತೆ
ಗಾಂಜಾ ಮಾರಾಟ\ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಹಾಗೂ 650 ಗ್ರಾಂ ಗಾಂಜಾವನ್ನು ಮೂಡಿಗೆರೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೂಡಿಗೆರೆ ಪಟ್ಟಣಕ್ಕೆ ಪೇಂಟಿಂಗ್ ಕೆಲಸಕ್ಕೆ ಬಂದ ಬೆಳ್ತಂಗಡಿ ವಾಸಿಗಳಾದ ಉಮ್ಮರ್ ಉಲ್ ಫಾರೂಕ್ ಬಿನ್ ಬಿ ಹೆಚ್ ಮೊಹಮದ್ ಹಾಗೂ ಅಬ್ದುಲ್ ಹಕಂ ಬಿನ್ ಉಮ್ಮರ್ ಕೆ.ಪಿ ಎಂಬುವರುಗಳು ಅಕ್ರಮವಾಗಿ ಗಾಂಜಾ/ಮಾದಕ ದ್ರವ್ಯ(ಅಮಲು ಪದಾರ್ಥ) ವನ್ನು ಮಾರಾಟ ಮಾಡುವ ಉದ್ದೇಶದಿಂದ ಮೂಡಿಗೆರೆ ಪಟ್ಟಣದ ಛತ್ರಮೈದಾನಕ್ಕೆ ಹೋಗುವ ರಸ್ತೆಯ ಪಕ್ಕ ಸಂದೇಶ್ ಟಾಕೀಸ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ/ಮಾದಕವಸ್ತು ಸಾಗಿಸುತ್ತಿದ್ದವರನ್ನು ತನಿಖಾಧಿಕಾರಿ- ಕಿಶೋರ್ ಪಿ. ಪಿಎಸ್ಐ ನೇತೃತ್ವದಲ್ಲಿ ಗಾಂಜಾ ಪೆಡ್ಲರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಷ್ಟು ದಿನ ದೊಡ್ಡ ದೊಡ್ಡ ನಗರಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು, ಗಾಂಜಾ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು ಆದರೆ ಇತ್ತೀಚಿಗೆ ಸಣ್ಣ ತಾಲ್ಲೂಕುಗಳಲ್ಲಿ ಗಾಂಜಾ ಮಾರಾಟ ಹೆಚ್ಚಾಗುತ್ತಿದೆ. ಆದರೆ ಸಣ್ಣ ನಗರದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದಕ್ಕೆ ಪೊಲೀಸರಿಗೆ ತಲೆ ನೋವಿನ ಸಂಗತಿ ಆಗಿದೆ.
– ಕಾವ್ಯಶ್ರೀ ಕಲ್ಮನೆ