Friday, July 31, 2026
Homeಜಿಲ್ಲಾಸುದ್ದಿSSLCಯಲ್ಲಿ ಮೂಡಿಗೆರೆ ತಾಲೂಕಿಗೆ ದ್ವಿತೀಯ ಸ್ಥಾನ: ಬಿಬಿ ಜೈನಬ್‌ಗೆ 609 ಅಂಕ, 98% ಸಾಧನೆ

SSLCಯಲ್ಲಿ ಮೂಡಿಗೆರೆ ತಾಲೂಕಿಗೆ ದ್ವಿತೀಯ ಸ್ಥಾನ: ಬಿಬಿ ಜೈನಬ್‌ಗೆ 609 ಅಂಕ, 98% ಸಾಧನೆ

Telegram Group
Join Now

ಮೂಡಿಗೆರೆ:ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಮೂಡಿಗೆರೆಯ ಬೆಥನಿ ಹೈಸ್ಕೂಲ್ ವಿದ್ಯಾರ್ಥಿನಿ ಬಿಬಿ ಜೈನಬ್ ಅವರು 609 ಅಂಕಗಳನ್ನು ಗಳಿಸಿ 98% ಸಾಧನೆ ಮಾಡಿದ್ದು, ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಬಿಬಿ ಜೈನಬ್ ಅವರು ಅಸ್ಗರ್ ಅಲಿ ಖಾನ್ ಹಾಗೂ ನಾಜಿಯಾ ತಮನ್ನಾ ಅವರ ಪುತ್ರಿಯಾಗಿದ್ದಾರೆ. ಇವರಿಬ್ಬರೂ ಸರಕಾರಿ ಶಾಲೆಯ ಶಿಕ್ಷಕರಾಗಿದ್ದು, ಕುಟುಂಬ ಮೂಲತಃ ಮೂಡಿಗೆರೆಯ ಬಿಳಗುಳ ಗ್ರಾಮದವರು.
ಪೋಷಕರ ಪ್ರೇರಣೆ ಹಾಗೂ ಶಿಕ್ಷಕರ ಸಮರ್ಪಕ ಮಾರ್ಗದರ್ಶನವೇ ಈ ಸಾಧನೆಗೆ ಕಾರಣವಾಗಿದೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.

ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ಬಂಧು-ಬಳಗದಿಂದ ಹೃತ್ಪೂರ್ವಕ ಶ್ಲಾಘನೆಗಳು ವ್ಯಕ್ತವಾಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments