Monday, August 4, 2025
!-- afp header code starts here -->
HomeರಾಜಕೀಯMP Sumalatha Ambareesh: ಮಹತ್ವದ ನಿರ್ಧಾರ ಘೋಷಿಸಿದ ಸುಮಲತಾ ಅಂಬರೀಶ್‌! 

MP Sumalatha Ambareesh: ಮಹತ್ವದ ನಿರ್ಧಾರ ಘೋಷಿಸಿದ ಸುಮಲತಾ ಅಂಬರೀಶ್‌! 

ಇಂದು ಮಂಡ್ಯದಲ್ಲಿ ನಟ ದರ್ಶನ್‌, ಹಾಗೂ ಅಭಿಷೇಕ್ ಅಂಬರೀಶ್ ಹಾಗೂ ಅಂಬಿ ಬೆಂಬಲಿಗರ ಸಮ್ಮುಖದಲ್ಲಿ ತಮ್ಮ ಮುಂದಿನ ನಡೆ ಬಗ್ಗೆ ತಿಳಿಸಿದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದರಿಂದ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಸುಮಲತಾ ಅಂಬರೀಶ್ ನಿರೀಕ್ಷೆಯಲ್ಲಿದ್ದರು.

ಆದರೆ ಅಂತಿಮ ಹಂತದಲ್ಲಿ ಟಿಕೆಟ್‌ ಕೈ ತಪ್ಪಿತ್ತು. ಆದ್ದರಿಂದ ಅನೇಕರಿಗೆ ಸುಮಲತಾ ಅಂಬರೀಶ್​ ಅವರ ಮುಂದಿನ ನಡೆ ಏನು ಎಂಬುವುದು ಯಕ್ಷ ಪ್ರಶ್ನೆಯಾಗಿತ್ತು. ಈ ಎಲ್ಲಾ ಗೊಂದಲಗಳಿಗೆ ಇಂದು ಮಂಡ್ಯದಲ್ಲಿ ತೆರೆ ಎಳೆದಿದ್ದಾರೆ.

ಇಂದು ಮಂಡ್ಯದಲ್ಲಿ ನಟ ದರ್ಶನ್‌, ಹಾಗೂ ಅಭಿಷೇಕ್ ಅಂಬರೀಶ್ ಹಾಗೂ ಅಂಬರೀಶ್‌ ಬೆಂಬಲಿಗರು, ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಮುಂದಿನ ನಡೆ ಬಗ್ಗೆ ತಿಳಿಸಿದರು. ಹಾಗೂ ಅದೇ ಸಂದರ್ಭದಲ್ಲಿ ಸಂಸದೆ ಆದ ಬಳಿಕ ಮಂಡ್ಯ ಕ್ಷೇತ್ರಕ್ಕೆ ಸುಮಲತಾರವರು ನೀಡಿದ ಕೊಡುಗೆಯನ್ನು ಸಾಕ್ಷ್ಯ ಚಿತ್ರದ ಮೂಲಕ ಮಾಧ್ಯಮದ ಮಂದೆ ಇಟ್ಟರು.

ಬೆಂಬಲಿಗರ ಸಭೆಯಲ್ಲಿ ಮಾತಾನಾಡಿದ ಸುಮಲತಾ, 2019ರಲ್ಲಿ ಅದೊಂದು ಬೇರೆ ತರಹದ ಸವಾಲಾಗಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಂದು ಸವಾಲು ಎದುರಿಸುತ್ತಿದ್ದೇನೆ. ಕೊನೆಗಳಿಗೆವರೆಗೂ ಬಿಜೆಪಿ ಟಿಕೆಟ್ ಉಳಿಸಿಕೊಳ್ಳಲು ಹೋರಾಟ ಮಾಡಿದೆ. ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರ ನಿಂತುಕೊಳ್ಳೊಲು ಹೇಳಿದರು. ನನಗೆ ಬೇರೆ ಬೇರೆ ಕ್ಷೇತ್ರದ ಆಫರ್​ ನೀಡಿದರು. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದರು.

ನಾನು ಸ್ವಾರ್ಥ ರಾಜಕಾರಣ ಮಾಡಲ್ಲ, ರಾಜಕೀಯದಲ್ಲೇ ಮುಂದುವರಿಯುವ ಆಸೆ ಇದ್ದಿದ್ದರೇ ಬಿಜೆಪಿಯಿಂದ ಬೇರೆ ಬೇರೆ ಕ್ಷೇತ್ರದ ಆಫರ್‌ ಬಂದಿತ್ತು ಆದರೆ ಮಂಡ್ಯ ಬಿಟ್ಟು ಹೋಗುವ ಮನಸ್ಸಿಲ್ಲದೇ ಇಲ್ಲೆ ಉಳಿಯುವ ನಿರ್ಧಾರ ಮಾಡಿದ್ದೇನೆ ಎಂದರು. ಕಾಂಗ್ರೆಸ್‌ ಅವರು ನಮ್ಮನ್ನು ಕೈ ಬಿಟ್ಟಿದ್ದಾರೆಂದು ಕೈ ನಾಯಕರ ವಿರುದ್ಧ ಬೇಸರ ಹೊರ ಹಾಕಿದ್ರು. ಇಷ್ಟು ದಿನ ಬಿಜೆಪಿಗೆ ನನ್ನ ಬೆಂಬಲವಿತ್ತು ಆದರೆ ಇಂದಿನಿಂದ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದರು. ಹಾಗೆಯೇ ಮೈತ್ರಿ ಅಭ್ಯರ್ಥಿಯಾಗಿರುವ ಮಂಡ್ಯದಿಂದ ಸ್ಪರ್ಧಿಸುವ ಹೆಚ್ ಡಿ ಕುಮಾರ ಸ್ವಾಮಿಗೆ ಬೆಂಬಲ ಸೂಚಿಸುತ್ತೇನೆ ಎಂದರು.

– ಕಾವ್ಯಶ್ರೀ ಕಲ್ಮನೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!