ಒಂದು ವರ್ಷದ ಮಗುವೊಂದು ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ಬಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ. ಸದ್ಯ ಮಗು ಜೀವಂತವಾಗಿದ್ದು, ಕೊಳವೆ ಬಾವಿಗೆ ಬಿದ್ದರುವ 2 ವರ್ಷದ ಮಗು ಸಾತ್ವಿಕ್ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಮಗುವನ್ನು ರಕ್ಷಿಸಲು ಘಟನಾ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.

ಪುಟ್ಟ ಕಂದಮ್ಮನ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದ ಎಸ್ ಡಿ ಆರ್ ಎಫ್ ಸಿಬ್ಬಂದಿಯಿಂದ ತ್ವರಿತ ಕಾರ್ಯಾಚರಣೆ ಮುಂದುವರಿಸುತ್ತಿದ್ದಾರೆ. ಇನ್ನು ಬಾಲಕನಿಗೆ ಕೊಳವೆ ಬಾವಿಯಲ್ಲಿ ಉಸಿರಾಟಕ್ಕೆ ತೊಂದರೆಯಾಗದಂತೆ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದಾರೆ. ಕ್ಯಾಮೆರಾ ಮೂಲಕ ಮಗುವಿನ ಚಲನವಲಗಳನ್ನು ಗಮನಿಸಲಾಗುತ್ತಿದೆ.
ಮಗು ಅಳುವ ಶಬ್ದ ಕೇಳುತ್ತಿದೆ ಎಂದು ಎಸ್ ಡಿ ಆರ್ ಎಫ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕೊಳವೆ ಬಾವಿಯ 16 ಅಡಿಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಮಗುವನ್ನು ತೆಗೆಯಲು ಅಕ್ಕಪಕ್ಕದ ಮಣ್ಣು ತೆರೆವುಗೊಳಿಸಿ ನಂತರ ಬಾಲಕನನ್ನು ಹೊರ ತೆಗೆಯ ಬೇಕಾಗುತ್ತದೆ. ಇನ್ನು ಒಂದು ವರ್ಷದ ಸಾತ್ವಿಕ್ ಜೀವಂತವಾಗಿ ಬರಲೆಂದು ಕಟುಂಬಸ್ಥರು ಸೇರಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
– ಕಾವ್ಯಶ್ರೀ ಕಲ್ಮನೆ