Tuesday, July 14, 2026
Homeಕ್ರೈಮ್ಚಿಕ್ಕಮಗಳೂರು: ಪರವಾನಗಿ ಇಲ್ಲದೆ ಮನೆಯಲ್ಲಿದ್ದ ಸಿಂಗಲ್‌ ಬ್ಯಾರೆಲ್‌ ಬಂದೂಕು ಜಪ್ತಿ: ಆರೋಪಿ ಪೊಲೀಸರ ವಶಕ್ಕೆ!

ಚಿಕ್ಕಮಗಳೂರು: ಪರವಾನಗಿ ಇಲ್ಲದೆ ಮನೆಯಲ್ಲಿದ್ದ ಸಿಂಗಲ್‌ ಬ್ಯಾರೆಲ್‌ ಬಂದೂಕು ಜಪ್ತಿ: ಆರೋಪಿ ಪೊಲೀಸರ ವಶಕ್ಕೆ!

Telegram Group
Join Now

ಚಿಕ್ಕಮಗಳೂರು: ಪರವಾನಗಿ ಇಲ್ಲದೆ ಮನೆಯಲ್ಲಿ ಇಟ್ಟುಕೊಂಡಿದ್ದ ಅಕ್ರಮ ಸಿಂಗಲ್ ಬ್ಯಾರೆಲ್ ಬಂದೂಕನ್ನು (ಎಸ್‌ಬಿಎಂಎಲ್) ಆಲ್ಲೂರು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹರವಿನಗಂಡಿ ಸಮೀಪದ ಅಡ್ಡಮಕ್ಕಿಯಲ್ಲಿ ನಡೆದಿದೆ.

ದಾಳಿಯ ವೇಳೆ ಮನೆಯನ್ನು ತಪಾಸಣೆ ನಡೆಸಿದಾಗ ಯಾವುದೇ ಕಾನೂನುಬದ್ಧ ದಾಖಲೆ ಅಥವಾ ಪರವಾನಗಿ ಇಲ್ಲದ 56 ಇಂಚು ಉದ್ದದ ಒಂಟಿ ನಳಿಕೆಯ ಮಸಿ ಬಂದೂಕು ಪತ್ತೆಯಾಗಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಧರ್ಮೇಶ್, ಈ ಬಂದೂಕು ತನ್ನ ತಂದೆಯ ಕಾಲದಿಂದಲೂ ಮನೆಯಲ್ಲಿದ್ದು, ಇದಕ್ಕೆ ಯಾವುದೇ ಪರವಾನಗಿ ಇಲ್ಲ ಎಂದು ಒಪ್ಪಿಕೊಂಡಿದ್ದಾನೆ.

ಮರದ ಬಟ್ ಹಾಗೂ ಕಬ್ಬಿಣದ ನಳಿಕೆ ಹೊಂದಿರುವ ಈ ಬಂದೂಕಿನ ನಳಿಕೆಯು 39.5 ಇಂಚು ಮತ್ತು ಬಟ್ 27 ಇಂಚು ಉದ್ದವಿದ್ದು, ಎರಡು ಕಡೆ ಹಿತ್ತಾಳೆ ಲೋಹದ ಪಟ್ಟಿಯನ್ನು ಸುತ್ತಲಾಗಿದೆ. ಬಂದೂಕಿನೊಂದಿಗೆ ಒಂದು ಗಜ ಕಡ್ಡಿಯನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಪರಿಶೀಲನೆ ವೇಳೆ ಅದರಲ್ಲಿ ಯಾವುದೇ ಮಸಿ ಗುಂಡುಗಳು ಪತ್ತೆಯಾಗಿಲ್ಲ.

ಸದ್ಯ ಅಕ್ರಮ ಆಯುಧದ ಜೊತೆಗೆ ಆರೋಪಿಯನ್ನು ಬಂಧಿಸಿರುವ ಆಲ್ಲೂರು ಠಾಣಾ ಪೊಲೀಸರು, ಆರೋಪಿಯ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments