Tuesday, July 14, 2026
Homeಕ್ರೈಮ್ಚಿಕ್ಕಮಗಳೂರಿನಲ್ಲಿ ಜೋರಾಯ್ತುಅನ್ನದಾತರ ಕಿಚ್ಚು: ತರಕಾರಿ ರೇಟ್‌ನಲ್ಲಿ ರೈತರಿಗೆ ಮಹಾ ಮೋಸ

ಚಿಕ್ಕಮಗಳೂರಿನಲ್ಲಿ ಜೋರಾಯ್ತುಅನ್ನದಾತರ ಕಿಚ್ಚು: ತರಕಾರಿ ರೇಟ್‌ನಲ್ಲಿ ರೈತರಿಗೆ ಮಹಾ ಮೋಸ

Telegram Group
Join Now

ಚಿಕ್ಕಮಗಳೂರಿನ ಕಡೂರು ರಸ್ತೆಯಲ್ಲಿರುವ ಎಪಿಎಂಸಿ ಮುಂದೆ ರಾತ್ರಿ ಭುಗಿಲೆದ್ದ ಅನ್ನದಾತರ ಆಕ್ರೋಶ.ಬೀನ್ಸ್ಗೆ ಸರಿ ಆದ ರೇಟ್ ಫಿಕ್ಸ್ ಮಾಡ್ಬೇಕು ಅಂತ ಹೇಳಿ ಎಪಿಎಂಸಿ ಎರಡು ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ರು.

ಮೈಸೂರು ಮಾರ್ಕೆಟಲ್ಲಿ ಬೀನ್ಸ್ಗೆ 80 ರಿಂದ 90 ರೂಪಾಯಿ ಇದೆ. ಆದ್ರೆ, ಚಿಕ್ಕಮಗಳೂರಿನ ಮಾರ್ಕೆಟಲ್ಲಿ ಮಾತ್ರ 30 ರಿಂದ 40 ರೂಪಾಯಿಗೆ ಕೂಗ್ತಾರೆ.ದಲ್ಲಾಳಿಗಳೇ ಇದ್ಯಾವ ನ್ಯಾಯ ಅಂತ ಹೇಳಿ ರೈತರು ಆಕ್ರೋಶ ಹೊರ ಹಾಕಿದ್ರು.ರೈತರ ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕಮಗಳೂ ರು ನಗರ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ರು. ಆದ್ರೂ, ಕ್ಷಣಕ್ಷಣಕ್ಕೂ ರೈತರ ಆಕ್ರೋಶ ಮಾತ್ರ ಜಾಸ್ತಿ ಆಗ್ತಾನೆ ಇತ್ತು.

ಎ ಪಿಎಂಸಿ ಆವರಣದಲ್ಲಿ ಎಲ್ಲೇ ನಿಂತ್ರು ರೈತರು ಹಾಗೂ ದಲ್ಲಾಳಿ, ಪೊಲೀಸರ ನಡುವೆ ಮಾತಿನ ಚಕಮಕಿ ಆಗ್ತಾನೆ ಇತ್ತು. ಸ್ಥಳಕ್ಕೆ ತಹಶಿಲ್ದಾ ರ್ ಕೂಡ ಆಗಮಿಸಿದ್ರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡರು ಕೂಡ ಆಗಮಿಸಿದ್ರು.ರೈತರ ಮನವೊಲಿಸೋ ಕೆಲಸ ಮಾಡಿದ್ರು. ಆದ್ರು ರೈತರ ಆಕ್ರೋಶ ಮಾತ್ರ ತಣ್ಣಗಾಗಲಿಲ್ಲ.ನಂತ್ರ ಎಪಿಎಂಸಿಯ ಮುಖ್ಯ ಅಧಿಕಾರಿ ಆಗಮಿಸಿದ್ರು ರೈತರ ಕಿಚ್ಚು ಮಾತ್ರ ತಣ್ಣಗಾಗಲಿಲ್ಲ.

ತರಕಾರಿಗೆ ಸರಿ ಆದ ಬೆಂಬಲ ಬೆಲೆ ಸಿಗೋ ತನಕ ಇಲ್ಲಿಂದ ಕದಲೋದಿಲ್ಲ ಅಂತ ಬಿಗಿ ಪಟ್ಟು ಹಿಡಿದ್ರು.ರೈತರ ಹೆಸರಲ್ಲಿ ಮಧ್ಯವರ್ತಿಗಳು ಮಾತ್ರ ಶ್ರೀಮಂತರು ಆಗ್ತಿದ್ದಾರೆ ನಮಗೆ ನ್ಯಾಯಯುತ ಬೆಲೆ ಸಿಗೋ ತನಕ ಇಲ್ಲಿಂದ ಹೋಗಲ್ಲ ಅಂದ್ರು ರೈತರು. ಮಾರ್ಕೆಟ್‌ನಲ್ಲಿ ಲೋಡ್ ಆಗಿ ಹೊರ ಹೋಗಬೇಕಿದ್ದ ಐಟಂ ಹಾಗೂ ಹೊರಗಡೆಯಿಂದ ಮಾರ್ಕೆಟ್‌ಗೆ ಬರಬೇಕಿದ್ದ ಪದಾರ್ಥಗಳು ಗಂಟೆಗಟ್ಟಲೇ ನಿಂತಿಕೊಂಡಿತ್ತು.ಒಟ್ನಲ್ಲಿ ಅನ್ನದಾತರ ಕಿಚ್ಚು ಮಾತ್ರ ಜೋರಾಗಿಯೇ ಇತ್ತು…

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments