Wednesday, July 15, 2026
Homeಕ್ರೈಮ್ಸಕಲೇಶಪುರದಲ್ಲಿ ಜಾಗದ ಹಕ್ಕಿಗಾಗಿ ಮುಖಾಮುಖಿ ಹೋರಾಟ: ಕಾನೂನು ವ್ಯಾಪ್ತಿಯಲ್ಲೇ ಸಮಸ್ಯೆ ಬಗೆಹರಿಯಲಿದೆ: ಶಾಸಕ ಸಿಮೆಂಟ್...

ಸಕಲೇಶಪುರದಲ್ಲಿ ಜಾಗದ ಹಕ್ಕಿಗಾಗಿ ಮುಖಾಮುಖಿ ಹೋರಾಟ: ಕಾನೂನು ವ್ಯಾಪ್ತಿಯಲ್ಲೇ ಸಮಸ್ಯೆ ಬಗೆಹರಿಯಲಿದೆ: ಶಾಸಕ ಸಿಮೆಂಟ್ ಮಂಜು

Telegram Group
Join Now

ಸಕಲೇಶಪುರ : ಅಗ್ರಹಾರ-ಬಸವನಹಳ್ಳಿ ಜಾಗ ವಿವಾದಕ್ಕೆ ಹೊಸ ತಿರುವು ಸಿಕ್ಕಿದ್ದು ಈ ಸಂಬಂಧ ವಿವಾದಿತ ಜಾಗಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು,

ಹೌದು .. ಜಾಗದ ಮಾಲೀಕತ್ವದ ಕುರಿತು ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು ಸರ್ವೆ ಮಾಡಿ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಕಾನೂನು ವ್ಯಾಪ್ತಿಯಲ್ಲೇ ಸಮಸ್ಯೆ ಬಗೆಹರಿಯಲಿದೆ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು, ಶಾಂತಿ ಕದಡಬಾರದು ಎಂದು ಹೇಳಿದರು.

ಬಸವನಹಳ್ಳಿ ನಿವಾಸಿಗಳಿಂದ ಜಾಗ ನಮ್ಮದೇ ಎಂಬ ಹಕ್ಕು, ತಲೆತಲಾಂತರಗಳಿಂದ ನಮ್ಮ ಸ್ವಾಧೀನದಲ್ಲಿರುವ ಜಾಗ ಎಂದ ಮಧುಕುಮಾರ್

ನಕಲಿ ದಾಖಲೆ ತಂದು ಅಕ್ರಮವಾಗಿ ಶೆಡ್ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು ಗ್ರಾಮಠಾಣಾ ಜಾಗವಿದ್ದರೆ ಗ್ರಾಮದ ಅಭಿವೃದ್ಧಿಗೆ ಬಳಸುವಂತೆ ಒತ್ತಾಯ ಬಿಎಸ್‌ಪಿ ಮುಖಂಡರಿಂದ ದಲಿತರ ಜಾಗ ಕಬಳಿಕೆ ದಲಿತರಿಗೆ ಮೀಸಲಿದ್ದ 20 ಗುಂಟೆ ಜಾಗ ಮಾರಾಟ ಮಾಡಲಾಗಿದೆ ಎಂದು ಹರೀಶ್ ಅತ್ನಿ ಆರೋಪ ಮಾಡಲಾಗುತ್ತಿದೆ.

ಹಾಗೆ ದಲಿತರು ಶೆಡ್ ಹಾಕಿದಾಗ ಬೆದರಿಕೆ ಹಾಕಲಾಗಿದೆ ದಲಿತರಿಗೆ ಮೀಸಲು ಜಾಗ ಹಸ್ತಾಂತರಕ್ಕೆ ಒತ್ತಾಯ ನಿವೇಶನ ರಹಿತರಿಗೆ ಗ್ರಾಮಠಾಣಾ ಜಾಗ ನೀಡುವಂತೆ ಆಗ್ರಹ ದಾಖಲೆಗಳ ಪರಿಶೀಲನೆಯ ಬಳಿಕ ಅಂತಿಮ ತೀರ್ಮಾನ ಎಂದು ತಿಳಿಸಿದರು.
.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments