ಜಯಪುರ: ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ನಡುವಿನ ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ನೇರ ಪ್ರಸಾರವನ್ನು ಒಟ್ಟಿಗೆ ನೋಡಲು ಜಯಪುರ ಸರ್ಕಲ್ ನಲ್ಲಿ ಎಲ್ ಇಡಿ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರಾದ ಮಹೇಶ್ ನಂದಿನಿ ತಿಳಿಸಿದ್ದಾರೆ.
RCB ಬಳಗದ ಅಭಿಮಾನಿ ವತಿಯಿಂದ ಕಳೆದ ವರ್ಷ ಅಂತಿಮ ಪಂದ್ಯದ ನೇರಪ್ರಸಾರವನ್ನು ನೋಡಲು ಎಲ್ ಇಡಿ ವ್ಯವಸ್ಥೆ ಮಾಡಲಾಗಿದ್ದು ಈ ಹಿನ್ನಲೆಯಲ್ಲಿ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದರು.
ಈ ವರ್ಷವೂ ಕೂಡ RCB ಅಭಿಮಾನಿಗಳು ಕೂಡ ಎಲ್ಲರೂ ಒಂದೇ ಕಡೆ ಸೇರಿ ಆಟವನ್ನು ವೀಕ್ಷಿಸಲು ಎಂದು ಎಲ್ ಇಡಿ ವ್ಯವಸ್ಥೆ ಮಾಡಲಾಗಿದೆ. ಸಂಜೆ ಏಳು ಗಂಟೆಯಿಂದ ನೇರ ಪ್ರಸಾರದ ವ್ಯವಸ್ಥೆ ಇರುತ್ತದೆ. RCB ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಆಯೋಜಕರಾದ ಮಹೇಶ್ ನಂದಿನಿ ತಿಳಿಸಿದರು.
