Saturday, July 18, 2026
Homeಜಿಲ್ಲಾಸುದ್ದಿಅನಾರೋಗ್ಯದಿಂದ ನಿವೃತ್ತ ರೆವೆನ್ಯೂ ಇನ್ಸ್ ಪೆಕ್ಟ‌ರ್ ದಾರದಹಳ್ಳಿ ಗ್ರಾಮದ ಡಿ.ಎನ್.ಚಂದ್ರೆಗೌಡ ನಿಧನ

ಅನಾರೋಗ್ಯದಿಂದ ನಿವೃತ್ತ ರೆವೆನ್ಯೂ ಇನ್ಸ್ ಪೆಕ್ಟ‌ರ್ ದಾರದಹಳ್ಳಿ ಗ್ರಾಮದ ಡಿ.ಎನ್.ಚಂದ್ರೆಗೌಡ ನಿಧನ

Telegram Group
Join Now

ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದ ನಿವೃತ್ತ ರೆವೆನ್ಯೂ ಇನ್ಸೆಕ್ಟರ್ ಡಿ.ಎನ್ ಚಂದ್ರೇಗೌಡ (83 ವರ್ಷ) ಇಂದು ಮಂಗಳವಾರ ಮಧ್ಯಾಹ್ನ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.


‎ಡಿ.ಎನ್ ಚಂದ್ರೇಗೌಡರು ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಮೂಡಿಗೆರೆ, ಬಾಳೆಹೊನ್ನೂರು, ಎನ್‌ಆ‌ರ್ ಪುರ ಮುಂತಾದ ಕಡೆ ಸೇವೆ ಸಲ್ಲಿಸಿದ್ದರು.

‎ರೆವೆನ್ಯೂ ಇನ್ಸೆಕ್ಟರ್ ಆಗಿ ಭರ್ತಿ ಪಡೆದು ನಿವೃತ್ತರಾಗಿದ್ದರು. ಇವರು ತಮ್ಮ ಸೇವಾ ಅವಧಿಯಲ್ಲಿ ತಮ್ಮ ಕರ್ತವ್ಯ ನಿಷ್ಠೆಯಿಂದ ಹೆಸರು ಮಾಡಿದ್ದರು. ನಿವೃತ್ತಿಯ ನಂತರ ದಾರದಹಳ್ಳಿಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

‎ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.‎ಮೃತರ ಅಂತ್ಯ ಸಂಸ್ಕಾರವು ನಾಳೆ ದಿನಾಂಕ 3-6-2026 ಬುಧವಾರ ಮಧ್ಯಾಹ್ನ 12:30 ಕ್ಕೆ ದಾರದಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments