Monday, August 4, 2025
!-- afp header code starts here -->
Homeರಾಜಕೀಯಪ್ರೀತಂ ಗೌಡ ಅತ್ಯಾಪ್ತರು ಶ್ರೇಯಸ್‌ ಪಟೇಲ್‌ಗೆ ಬೆಂಬಲ; ಪ್ರಜ್ವಲ್‌ ರೇವಣ್ಣ ಶಾಕ್

ಪ್ರೀತಂ ಗೌಡ ಅತ್ಯಾಪ್ತರು ಶ್ರೇಯಸ್‌ ಪಟೇಲ್‌ಗೆ ಬೆಂಬಲ; ಪ್ರಜ್ವಲ್‌ ರೇವಣ್ಣ ಶಾಕ್

ಶ್ರೇಯಸ್‌ ಪಟೇಲ್‌ಗೆ ಬೆಂಬಲ ಸೂಚಿಸಿದ ಪ್ರೀತಂ ಗೌಡ ಬೆಂಬಲಿಗರು

Hassan; ಈಗಾಗಲೇ ರಾಜ್ಯದಲ್ಲಿ ಮೊದಲ ಹಂತದ ಲೋಕ ಸಭೆ ಚುನಾವಣೆಗೆ ದಿನಗಣನೇ ಶುರುವಾಗಿದೆ. ಅದರ ಬೆನ್ನಲೇ ಪ್ರೀತಂ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪ್ರೀತಂಗೌಡ ಬಲಗೈ ಬಂಟ ಉದ್ದೂರು ಪುರುಷೋತ್ತಮ್ ಸೇರಿ ಹಲವರಿಂದ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಎದುರು ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ಗೆ ಬೆಂಬಲ ಘೋಷಿಸಿರುವುದು ಒಂದು ಬಾರಿ ಬಿಜೆಪಿ- ಜೆಡಿಎಸ್‌ ನಾಯಕರಿಗೆ ಆತಂಕ ಹುಟ್ಟಿಸಿದೆ.‌

ಹಾಸನ ಲೋಕ ಸಭೆ ಕ್ಷೇತ್ರದಲ್ಲಿ ಪ್ರಚಾರ, ಬೆಂಬಲ ಕುರಿತು ಗೊಂದಲದ ಗೂಡಾಗಿದೆ. ಅದರ ನಡುವೆ ಈವರೆಗೂ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಪ್ರೀತಂ ಗೌಡ ಪ್ರಚಾರದ ಬಗ್ಗೆ ಯಾವುದೇ ಸೂಚನೆ ನೀಡದೇ ಸುಮ್ಮನಾಗಿದ್ದಾರೆ. ಇನ್ನು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ರವರು ಅಗರ್‌ವಾಲ್‌ ಮಾಡಿದ ಪ್ರೀತಂ ಗೌಡ ಅವರು ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಸಂಧಾನ ಕಾರ್ಯವು ಯಾವುದೇ ಪ್ರಯೋಜನಕ್ಕೆ ಬಂದಿಲ್ಲ. ಪ್ರೀತಂಗೌಡ ಸಹ ಯಾರನ್ನು ಬೆಂಬಲಿಸಬೇಕು ಎಂದು ತಮ್ಮ ಬೆಂಬಲಿಗರಿಗೆ ಯಾವುದೇ ರೀತಿಯ ಸೂಚನೆಯನ್ನು ನೀಡಿಲ್ಲವಂತೆ. ಇಕ್ಕಟ್ಟಿನಲ್ಲಿರುವ ಪ್ರೀತಂಗೌಡ ಬೆಂಬಲಿಗರು ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಎದುರು ಸ್ಪರ್ಧೆ ಮಾಡಿರುವ ಶ್ರೇಯಸ್‌ ಪಟೇಲ್‌ಗೆ ಬೆಂಬಲವನ್ನು ಘೋಷಿಸಿದ್ದಾರೆ.

ಪ್ರೀತಂ ಗೌಡ ಹಾಗೂ ಪ್ರಜ್ವಲ್‌ ರೇವಣ್ಣರವರ ಮೈತ್ರಿ ಒಳ ಗುದ್ದಾಟ, ಪರೋಕ್ಷ ಅಸಮಾಧಾನಕ್ಕೆ ಚುನಾವಣೆಗೂ ಮುಂಚೆ ತೆರೆ ಬಿದ್ದರೇ ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ಸಾಧ್ಯತೆ ಇರುತ್ತದೆ. ಇಲ್ಲ ಮುನಿಸು ಮುಂದುವರಿದರೇ ಇಬ್ಬರ ಜಗಳ ಮೂರನೇಯವನಿಗೆ ಲಾಭ ಎಂಬ ಗಾದೆ ಮಾತಿಗೆ ಹಾಸನ ಕ್ಷೇತ್ರ ಸಾಕ್ಷಿಯಾಗಲಿದೆ ಎಂದು ಮತದಾರರ ಅಭಿಪ್ರಾಯವಾಗಿದೆ.

-ಕಾವ್ಯಶ್ರೀ ಕಲ್ಮನೆ

https://www.youtube.com/watch?v=VLhdpUdhCxo

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!