ಮೂಡಿಗೆರೆ: ಅಧಿಕಾರ ಎಂಬ ಸಕ್ಕರೆಗೆ ಇರುವೆ ಮುತ್ತುವುದು ಸಹಜ, ಪರಿಷತ್ ಗೆಲುವಿಗೆ ಕಾಂಗ್ರೆಸ್ ಹೆಮ್ಮೆಪಡಬೇಕಿಲ್ಲ. ಸಕ್ಕರೆ ಒಂದು ದಿವಸ ಖಾಲಿಯಾಗುವುದು ಸಹಜ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್, ಕಾಂಗ್ರೆಸ್ ನ ಚಾಣಕ್ಯ ನೀತಿಯನ್ನು ಲೇವಡಿ ಮಾಡಿದ್ದಾರೆ.
ಅವರು ಹೇಳಿಕೆಯಲ್ಲಿ ತಿಳಿಸಿ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಶಾಸಕರ ಕೆಲವು ಮತಗಳನ್ನು ಅಡ್ಡ ಮತದಾನ ಮೂಲಕ ಹಾಕಿಸಿ ಕೊಂಡಿರಬಹುದು. ಇದಕ್ಕೆ ಅಧಿಕಾರದಲ್ಲಿರುವ ಪಕ್ಷವು ಬೀಗ ಬೇಕಾಗಿಲ್ಲ. ಅಧಿಕಾರ ಎಂಬುದು ಸಕ್ಕರೆ. ಇರುವೆಗಳು ಹೋಗುವುದು ಸಹಜ. ಆದರೆ ಒಂದು ದಿವಸ ಇವರ ಅಧಿಕಾರ ಎಂಬ ಸಕ್ಕರೆ ಖಾಲಿಯಾಗಲೇಬೇಕು. ಆ ಕ್ಷಣದಲ್ಲಿ ನಿಮ್ಮ ಸುತ್ತ ಯಾರು ಇರುವುದಿಲ್ಲ. ಈ ಹಿಂದಿನಿಂದಲೂ ಆಪರೇಷನ್ ಕಮಲ ಎಂದು ಜನರಿಗೆ ಸುಳ್ಳು ಸುದ್ದಿ ಹಬ್ಬಿಸುವಲ್ಲಿ ಕಾಂಗ್ರೆಸ್ ನಿಸ್ಸಿಮಾವಾಗಿತ್ತು.
ಹಿಂದಿನಿಂದಲೂ ವಿರೋಧ ಪಕ್ಷದ ಸದಸ್ಯರನ್ನು ಹಣ. ತೋಳ್ಬಲ. ಅಧಿಕಾರ ದರ್ಪದಲ್ಲಿ ಖರೀದಿಸುವುದು ನಿಮ್ಮ ಚಾಳಿಯಾಗಿದೆ. ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕ್ಷೇತ್ರದ ಜನಪ್ರತಿನಿಧಿಗಳಿಗೆ ಅನುದಾನ ಕೊಡಲು ನಿಮಗೆ ಸಾಧ್ಯವಾಗುತ್ತಿಲ್ಲ. ಕೆಲವೆ ನಿಮ್ಮ ಪಕ್ಷದ ಅಯ್ದ ಶಾಸಕರಿಗೆ ಮಾತ್ರ ಅನುಧಾನ ನೀಡುತ್ತಿದ್ದಿರಿ. ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವಲ್ಲಿ ವಿಫಲರಾಗಿದ್ದೀರಿ. ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ವಿರೋಧಿ ಕಾರ್ಯಕರ್ತರನ್ನು ಬೆದರಿಸುತ್ತಿದ್ದೀರಿ. ಅಭಿವೃದ್ಧಿ ಮರಿಚಿಕೆಯಾಗಿದೆ. ರಾಜ್ಯದ ಹಣಕಾಲು ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ. ರಸ್ತೆಗಳು ಗುಂಡಿ ಬಿದ್ದಿವೆ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ ಅತ್ತ ನಿಮ್ಮ ಗಮನವಿಲ್ಲ.
ಎಸ್ ಸಿ. ಎಸ್ ಟಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ. ಕರ್ನಾಟಕವನ್ನು ನಿಮ್ಮ ಅಡಳಿತ ಅವದಿಯಲ್ಲಿ ಭ್ರಷ್ಟಾಚಾರದ ಪಿತಾಮಹ ಮಾಡಿದ್ದೀರಿ. ಯಾವುದೇ ಸರ್ಕಾರಿ ಕೆಲಸಗಳು ಕಚೇರಿಗಳಲ್ಲಿ ಹಣವಿಲ್ಲದೆ ನಡೆಯುತ್ತಿಲ್ಲ. ನಿಮ್ಮ ಅಧಿಕಾರದ ಮದ ಇನ್ನು ಹೆಚ್ಚು ದಿನ ಉಳಿಯುವುದಿಲ್ಲ. ಕೇವಲ ಎರಡು ವರ್ಷಗಳು ಬಾಕಿ ಇವೆ.
ಇಡೀ ದೇಶದಲ್ಲಿ ಈಗಾಗಲೇ ನಾಶವಾಗಿದ್ದೀರಿ. ಪರಿಷತ್ ಚುನಾವಣೆ ಸಾರ್ವಜನಿಕ ಚುನಾವಣೆ ಅಲ್ಲ. ಇನ್ನಾದರೂ ಅಧಿಕಾರದಿಂದ ಇಳಿಯುವ ಮುಂಚೆ ಜನರು ನೆನಪಿಟ್ಟು ಕೊಳ್ಳುವ ಒಂದಷ್ಟು ಅಭಿವೃದ್ಧಿ ಕೆಲಸ ಮಾಡಿ. ರಾಜ್ಯದ ಮತದಾರರು ನಿಮ್ಮನ್ನು ಮನೆಗೆ ಕಳಿಸಲು ಅದಾಗಲೆ ಕಾಯುತ್ತಿದ್ದಾರೆ ಎಂದು ತಿಳಿಸಿದರು.
