ಎನ್ ಆರ್ ಪುರ: ವಿವಾಹಿತ ಮಹಿಳೆಯನ್ನ ಪ್ರೀತಿಸುತ್ತಿದ್ದ ಯುವಕನ ಎರಡು ಕೈ ಕಟ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಹೂವಿನಹಕ್ಲು ಗ್ರಾಮದಲ್ಲಿ ನಡೆದಿದೆ.
ಮಹಿಳೆ ಮನೆಗೆ ಮಿಡ್ನೈಟ್ ತೆರಳಿದ್ದ ಅರುಣ್ ಮೇಲೆ ಗ್ಯಾಂಗ್ ಹೊರಗಡೆ ಅಟ್ಯಾಕ್ ಮಾಡಿದೆ.ಅರುಣ್ ಮೇಲೆ ಏಕ್ದಂ ಅಟ್ಯಾಕ್ ಮಾಡಿ ಮಚ್ಚಿನಿಂದ ಆತನ ಎರಡು ಕೈಗಳನ್ನ ಕಟ್ ಮಾಡಿದ್ದಾರೆ.ನಂತರ ಈ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದೆ. ಅರುಣ್ಗೆ ಗಂಭೀರ ಗಾಯಗಳು ಆಗಿದ್ದು ಮಂಗಳೂರಿನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡ ಲಾಗ್ತಿದೆ.
ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪಕ್ಕಾ ಅರುಣ್ ಮೇಲೆ ಯಾವ ಕಾರಣಕ್ಕೆ ಮಚ್ಚಿ ನಿಂದ ದಾಳಿ ಆಗಿದೆ ಅನ್ನೋದು ತನಿಖೆಯಿಂದ ಮಾತ್ರ ಸತ್ಯ ಹೊರ ಬರಬೇಕಿದೆ.
