ಚಿಕ್ಕಮಗಳೂರಿಗೆ ತಡರಾತ್ರಿ ಆಗಮಿಸಿರುವ ಕನ್ನೇರಿ ಸ್ವಾಮೀಜಿ ಅವರು ಇಂದು ಕುವೆಂಪು ಕಲಾಮಂದಿರದಲ್ಲಿ ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ಸಾವಯವ ಹಾಗೂ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಭಾಗಿಯಾಗಗಲಿದ್ದು ರೈತರಿಗೆ ಕೃಷಿ ಕ್ರಾಂತಿಯ ಬಗ್ಗೆ ಸಂದೇಶ ಸಾರಲಿದ್ದು ಹಾಗೆ ಸಾವಯವ ಕೃಷಿ, ಸಹಜ ಕೃಷಿ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಮಾರ್ಗದರ್ಶನ ಜೊತೆಗೆ ನೈಸರ್ಗಿಕ ಕೃಷಿಯ ಮಹತ್ವದ ಬಗ್ಗೆ ಕನ್ನೇರಿ ಸ್ವಾಮೀಜಿ ಅರಿವು ಮೂಡಿಸಲಿದ್ದಾರೆ.
ಹೀಗಾಗಿ ಈ ಕಾರ್ಯಕ್ರಮಕ್ಕೆ ಬರುವವರಿಗೆ ಚಿಕ್ಕಮಗಳೂರಿನ ರೈತರು ಮತ್ತು ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಲಾಗಿದ್ದು ಕುವೆಂಪು ಕಲಾಮಂದಿರಕ್ಕೆ ಸಾವಿರಾರು ರೈತರ ಆಗಮನದ ನಿರೀಕ್ಷೆ ಇದೆ.
ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಮಾಡುವ ವಿಧಾನಗಳ ಕುರಿತು ರೈತರಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು ನೈಸರ್ಗಿಕ ಕೃಷಿಯ ಮಹತ್ವ ಸಾರಲಿರುವ ಕನ್ನೇರಿ ಸ್ವಾಮೀಜ
