ಕಾಫಿನಾಡಿನಲ್ಲಿ ಮುಂದುವರಿದ ಕಾಡಾನೆ ಉಪಟಳಕ್ಕೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
ಮೂಡಿಗೆರೆ: ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಬಾಳೆ ಬೆಳೆ ನಾಶಪಡಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಗ್ರಾಮದಲ್ಲಿ ನಡೆದಿದೆ. ದೇವನಗುಲ್ ಗ್ರಾಮದ ಡಿ.ಟಿ.ಮಂಜುನಾಥ್ ಆಚಾರ್, ವೀರಪ್ಪ ಅವರ ತೋಟ ಹಾಗೂ ಅಕ್ಕಪಕ್ಕದ ತೋಟಗಳಲ್ಲಿ ಕಾಡಾನೆ ಸಂಚರಿಸಿ ಬಾಳೆ ಬೆಳೆ ನಾಶಪಡಿಸಿವೆ.

ಕಾಡಾನೆಗಳ ಓಡಾಟದಿಂದ ತೋಟಕ್ಕೆ ಹೋಗಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಫಿನಾಡಿನಲ್ಲಿ ಕಾಡಾನೆ ಹಾವಳಿಗೆ ಕೊನೆಯೇ ಇಲ್ಲದಂತಾಗಿದೆ. ಆಹಾರ ಅರಸಿ ಊರಿಗೆ ಕಾಲಿಡುತ್ತಿರುವ ಕಾಡಾನೆಗಳು ಬೆಳೆ ನಾಶಪಡಿಸುತ್ತಿರುವುದರಿಂದ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಕಾಡಾನೆ ದಾಳಿಯ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.