Friday, August 14, 2026
Homeಕ್ರೈಮ್Dattapeeta Controversy: ದತ್ತಪೀಠ ಬಳಿ ಅನಧಿಕೃತ ಗೋರಿಗಳ ವಿವಾದ: ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳ ಆಗ್ರಹ!

Dattapeeta Controversy: ದತ್ತಪೀಠ ಬಳಿ ಅನಧಿಕೃತ ಗೋರಿಗಳ ವಿವಾದ: ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳ ಆಗ್ರಹ!

Telegram Group
Join Now

ಚಿಕ್ಕಮಗಳೂರು: ನಗರದ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಪರಿಸರದಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ.

ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಮೀಪದ ಮಾಣಿಕ್ಯಧಾರಕ್ಕೆ ತೆರಳುವ ರಸ್ತೆಯಲ್ಲಿ ಅನಧಿಕೃತವಾಗಿ ಮರಗಳ ಕೆಳಗೆ ಗೋರಿಗಳನ್ನ ನಿರ್ಮಿಸಿ, ಹಸಿರು ಬಟ್ಟೆಗಳ ಚಾದರ ಹೊದಿಸಿ ಹೊಸ ಆಚರಣೆ ಮಾಡಲಾಗ್ತಿದೆ ಎಂದು ಹಿಂದೂ ಸಂಘಟನೆಗಳು ಗಂಭೀರ ಆರೋಪ ಮಾಡಿವೆ. ಹೀಗಾಗಿ ಗೋರಿಗಳಿರುವ ಸ್ಥಳದಲ್ಲೇ ಜಿಪಿಎಸ್ ತಂತ್ರಜ್ಞಾನ ಬಳಸಿ ಉತ್ಖನನ ಮಾಡುವಂತೆ ಹಿಂದೂ ಸಂಘಟನೆ ಮುಖಂಡ ರಘು ಸಕಲೇಶಪುರ ಆಗ್ರಹಿಸಿದ್ದಾರೆ.

ಇಂದು ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ಹಿಂದೂ ಸಂಘಟನೆ ಕಾರ್ಯಕರ್ತರು ದತ್ತಪೀಠ ನಮ್ಮದು ಅಂತಾ ಘೋಷಣೆ ಕೂಗಿದ್ರು. ನ್ಯಾಯಾಲಯದ ಆದೇಶವನ್ನ ಚಿಕ್ಕಮಗಳೂರು ಜಿಲ್ಲಾಡಳಿತ ಧಿಕ್ಕರಿಸುತ್ತಿದೆ, ದತ್ತಪೀಠದಲ್ಲಿ ಹಸಿರುಕರಣ ಮಾಡುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments