ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
ಶಿವಮೊಗ್ಗ; ಟಿಕೆಟ್ ವಿಚಾರಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪರವರು ಬಂಡಾಯ ಅಭ್ಯರ್ಥಿಯಾಗಿ ಇಂದು ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ, ಬೆಂಬಲಿಗರ ಸಮ್ಮುಖದಲ್ಲಿ ಅದ್ದೂರಿ ಜಾಥಾ ಮೂಲಕ ನಾಮಪತ್ರ ಸಲ್ಲಿಸಿದರು.
ಶಿವಮೊಗ್ಗ ಲೋಕ ಸಭಾ ಕ್ಷೇತ್ರದಲ್ಲಿ ಎರಡನೇ ಹಂತದ ಚುನಾವಣೆ ಇರುವುದರಿಂದ ಉತ್ತರ ಕರ್ನಾಟಕ ಭಾಗಗಳಲ್ಲಿ ಚುನಾವಣಾ ಅಖಾಡಕ್ಕೆ ಇಳಿದಿರುವ ನಾಯಕರು ಇಂದು ನಾಮ ಪತ್ರ ಸಲ್ಲಿಸಲಿದ್ದಾರೆ.
ಈ ಹಿನ್ನಲೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತಮ್ಮ ಪುತ್ರನಿಗೆ ಟಿಕೆಟ್ ಕೊಡದಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ರೇಬಲ್ ನಾಯಕ ಕೆ.ಎಸ್ ಈಶ್ವರಪ್ಪರವರು ಕುಟುಂಬ ರಾಜಕಾರಣ ಮಾಡುತ್ತಿರುವ ಬಿಎಸ್ ವೈ ವಿರುದ್ಧ ಸಿಡಿದು ತಾವೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ರಾಜಕೀಯ ರಂಗದಲ್ಲಿ ಶಿವಮೊಗ್ಗದ ರೆಬಲ್ ಲೀಡರ್ ಕುಟುಂಬದವರನ್ನು ಬಿಜೆಪಿ ಹೈಕಮಾಂಡ್ ಹಂತ ಹಂತವಾಗಿ ದೂರ ಇಟ್ಟಿರುವುದಕ್ಕೆ ಬೇಸರಗೊಂಡಿರುವ ಕೆ.ಎಸ್ ಈಶ್ವರಪ್ಪ, ಯಡಿಯೂರಪ್ಪ ಕುಟುಂಬದ ವಿರುದ್ಧ ಇಂದು ಶಿವಮೊಗ್ಗದಲ್ಲಿ ಸಹಸ್ರಾರು ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ನಾಮಪತ್ರ ಪ್ರಚಾರದ ಬಳಿಕ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಗುರುದತ್ತ ಹೆಗಡೆಗೆ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಸಿದರು. ರೆಬಲ್ ಲೀಡರ್ ನಾಮಪತ್ರ ಸಲ್ಲಿಸುವ ವೇಳೆ ಪತ್ನಿ ಜಯಲಕ್ಷ್ಮಿ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ ಪಾಲಿಕೆ ಸದ್ಯ ವಿಶ್ವಾಸ್ ಉಪಸ್ಥಿತಿ ಇದ್ದರು.
ʼʼದೇಶಕ್ಕೆ ಮೋದಿ, ಶಿವಮೊಗ್ಗಕ್ಕೆ ಹಿಂದೂವಾದಿʼʼ ಎಂಬ ಘೋಷವಾಕ್ಯ ಮೂಲಕ ಹಿಂದೂ ಮತದಾರರನ್ನು ತನ್ನತ ಸೆಳೆಯುವ ಕಾರ್ಯ ಮಾಡಿದರು.
ಪುತ್ರನಿಗೆ ಹಾವೇರಿ ಟಿಕೆಟ್ ಮಿಸ್ ಆದ ಬಳಿಕ ಹಲವು ಬಾರಿ ಕೆ.ಎಸ್ ಈಶ್ವರಪ್ಪ ಬಿಜೆಪಿ ನಾಯಕರನ್ನು ಭೇಟಿ ಮಾಡಲು ಮುಂದಾಗಿದ್ದರೂ ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಶಿವಮೊಗ್ಗ ಮಾತ್ರವಲ್ಲದೇ ರಾಜ್ಯಾದಾದ್ಯಂತ ಬಿಜೆಪಿ ಹಾಗೂ ಹಿಂದೂ ಸಂಘಟನೆ ಬೆಳವಣಿಗೆಯಲ್ಲಿ ಕೆ.ಎಸ್ ಈಶ್ವರಪ್ಪ ಬಹು ಮುಖ್ಯ ಪಾತ್ರ ವಹಿಸಿದ್ದಾರೆ.
ಇನ್ನು ಆದಾಗಿಯೂ ಇತ್ತೀಚೇಗೆ ಟಿಕೆಟ್ ವಿಚಾರವಾಗಿ ಅಮಿತ್ ಶಾ ರವನ್ನು ಭೇಟಿ ಮಾಡಲು ದೆಹಲಿಗೆ ಹೋದಾಗ ಕೂಡ ಕೆ.ಎಸ್ ಈಶ್ವರಪ್ಪರವರಿಗೆ ಟಿಕೆಟ್ ಹಂಚಿಕೆ ಬಗ್ಗೆ ಯಾವುದೇ ರೀತಿಯ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲದೇ ರಾಜ್ಯಾಧ್ಯಕ್ಷ ಸ್ಥಾನ, ವಿಪಕ್ಷ ಸ್ಥಾನ ನಿರೀಕ್ಷೆಯಲ್ಲಿದ್ದ ರೆಬಲ್ ನಾಯಕ ಈಶ್ವರಪ್ಪರವರ ಕುಟುಂಬದವರನ್ನು ಬಿಜೆಪಿ ಯಾವ ಸ್ಥಾನಕ್ಕೂ ಪರಿಗಣಿಸಲಿಲ್ಲ. ಇದೆಲ್ಲಾದಕ್ಕೂ ಕುಟುಂಬ ರಾಜಕಾರಣದ ರುವಾರಿ ಬಿಎಸ್ ಯಡಿಯೂರಪ್ಪನವರೇ ಕಾರಣ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.
-ಕಾವ್ಯಶ್ರೀ ಕಲ್ಮನೆ