ಮೂಡಿಗೆರೆ: ಮೂಡಿಗೆರೆ ತಾಲ್ಲೂಕಿನ ಎಲ್ಲಾ ಭಾಗಗಳಲ್ಲಿ ಕಳೆದ ಒಂದು ವಾರದಿಂದ ನಿರಂತರ ಧಾರಾಕಾರ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ಇಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
ನಿರಂತರ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು, ಧರೆ ಕುಸಿತ, ಮರ, ವಿದ್ಯುತ್ ಕಂಬಗಳು ಬಿದಿದ್ದು ಅಪಾಯದ ವಾತಾವರಣ ನಿರ್ಮಾಣವಾಗಿದೆ ಅಲ್ಲದೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ
ಅಂಗನವಾಡಿ ಹಾಗೂ ಪ್ರಾಥಮಿಕ ತರಗತಿಗೆ ತೆರಳುವ ಮಕ್ಕಳಿಗೆ ರಜೆ ಘೋಷಣೆ ಮಾಡಲು ಹಿಂದೇಟು ಹಾಕುತ್ತಿದ್ದ ಶಿಕ್ಷಣ ಇಲಾಖೆಗೆ ಮಾಧ್ಯಮ ವರದಿಗಾರರು ತರಾಟೆಗೆ ತೆಗೆದು ರಜೆ ಘೋಷಣೆ ಒತ್ತಾಯಿಸಿದ್ದು ಕತ್ತಲ್ಲದ ಬಳಿಕ ರಜೆ ಮಾಹಿತಿ ನೀಡುವುದು ಸರಿಯಲ್ಲ ಆಯಾ ಶಾಲೆ ಆಡಳಿತ ಮಂಡಳಿ ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಸಂದೇಶ ರವಾನಿಸಿರುತ್ತಾರೆ ಶಾಲೆಗಳಿಗೆ ಹೆಚ್ಚಿನದಾಗಿ ಹಳ್ಳಿ ಪ್ರದೇಶದ ಮಕ್ಕಳು ಹೋಗುತ್ತಾರೆ, ಹೆಚ್ಚಿನ ಮಳೆಯಿಂದಾಗಿ ಕರೆಂಟ್ ವ್ಯವಸ್ಥೆ ಇರುವುದಿಲ್ಲ, ಮೊಬೈಲ್ ಸ್ವಿಚ್ ಆಫ್ ಆಗಿರುತ್ತವೆ ಇದರಿಂದ ನಮಗೆ ಮಾಹಿತಿ ದೊರೆಯದೆ ಶಾಲೆಗೆ ನಮ್ಮ ಮಕ್ಕಳನ್ನು ಕಳಿಸಿ ವಾಪಾಸ್ ಕರೆದು ಕೊಂಡು ಬಂದಿರುವುದಾಗಿ ತಿಳಿಸಿದ್ದು ಮುಂದಿನ ದಿನಗಳಲ್ಲಿ ರಜೆ ಕುರಿತು ಅಧಿಕಾರಿಗಳು ಶಾಲಾ ಮುಖ್ಯಸ್ತರಿಗೆ ಮತ್ತು ಸಾರ್ವಜನಿಕರಿಗೆ ಬೇಗನೆ ಮಾಹಿತಿ ನೀಡಿದರೆ ಉತ್ತಮ ಎಂಬುದಾಗಿ ಪೋಷಕರು ತಿಳಿಸಿದ್ದಾರೆ.
ಹಾಗೆಯೇ ಪ್ರೌಡ ಶಾಲಾ ಮಕ್ಕಳಿಗೆ –ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜುಗಳಿಗೆ ಕೂಡಲೆ ರಜೆ ಘೋಷಣೆಗೆ ಪೋಷಕರು ಆಗ್ರಹಿಸಿದ್ದಾರೆ.
ವರದಿ ಪುನೀತ್ ಕಡಿದಾಳು
9483811948
