Wednesday, July 8, 2026
Homeಜಿಲ್ಲಾಸುದ್ದಿKoppa: ಸಿನಿಮೀಯ ರೀತಿ ಅಕ್ರಮ ಗೋ ಸಾಗಾಣೆ ಕಾರು ಜಪ್ತಿ, ಇನ್ನೋವಾ ಕಾರು ವಶಕ್ಕೆ: ಗೋವುಗಳು...

Koppa: ಸಿನಿಮೀಯ ರೀತಿ ಅಕ್ರಮ ಗೋ ಸಾಗಾಣೆ ಕಾರು ಜಪ್ತಿ, ಇನ್ನೋವಾ ಕಾರು ವಶಕ್ಕೆ: ಗೋವುಗಳು ಸೇಫ್!

Telegram Group
Join Now

ಕೊಪ್ಪ: ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ಪೊಲೀಸರ ಭರ್ಜರಿ ಕಾರ್ಯಚರಣೆ ಮೇರೆಗೆ ಮೂರು ಗೋವುಗಳನ್ನ ರಕ್ಷಿಸಲಾಗಿದೆ. ಈ ಘಟನೆ  ಕೊಪ್ಪ ತಾಲೂಕಿನ ಗಡಿಕಲ್‌ ಚೆಕ್‌ ಪೋಸ್ಟ್‌ ಬಳಿ ನಡೆದಿದೆ.

ಹೌದು .. ಪೊಲೀಸರು ಗೋವುಗಳನ್ನು ರಕ್ಷಿಸಿ ಸಾಗಾಟಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ರಕ್ಷಿಸಲ್ಪಟ್ಟ ಮೂರು ಗೋವುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಕೊಪ್ಪ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಮೂಕಪ್ರಾಣಿಗಳನ್ನು ಮಿಂಚಿನಂತೆ ಕಾರ್ಯಚರಣೆ ನಡೆಸಿ ಗೋವುಗಳನ್ನು ಕಾಪಾಡಿದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments