Thursday, July 9, 2026
Homeಜಿಲ್ಲಾಸುದ್ದಿRambhapuri Shri: ಸಿಎಂ ಡಿ.ಕೆ ಶಿವಕುಮಾರ್‌ ಬಳಿ ಮಠದ ಅಭಿವೃದ್ಧಿಗೆ ಅನುದಾನಕ್ಕೆ ಮನವಿ ಮಾಡಿದ ರಂಭಾಪುರಿ...

Rambhapuri Shri: ಸಿಎಂ ಡಿ.ಕೆ ಶಿವಕುಮಾರ್‌ ಬಳಿ ಮಠದ ಅಭಿವೃದ್ಧಿಗೆ ಅನುದಾನಕ್ಕೆ ಮನವಿ ಮಾಡಿದ ರಂಭಾಪುರಿ ಶ್ರೀಗಳು

Telegram Group
Join Now

ಚಿಕ್ಕಮಗಳೂರು: ಮಠದ ಅಭಿವೃದ್ಧಿಗೆ ಅನುದಾನ ನೀಡುವಂತೆ ರಂಭಾಪುರಿ ಶ್ರೀಗಳು  ಸಿಎಂ ಡಿ.ಕೆ ಶಿವಕುಮಾರ್‌ ಅವರಿಗೆ ಕೇಳಿಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಪಂಚ ಪೀಠಗಳಲ್ಲೇ ಮೊದಲನೇ ಪೀಠ ರಂಭಾಪುರಿ ಮಠದ ಆವರಣದಲ್ಲಿ ನಿರ್ಮಾಣವಾಗುತ್ತಿರುವ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮೂರ್ತಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ 5 ಕೋಟಿ ರೂ. ಅನುದಾನ ನೀಡಿದ್ದರು. ಅವರ ಬಳಿಕ ಯಾವ ಸರ್ಕಾರಗಳು ಹೆಚ್ಚಿನ ಸಹಕಾರ ನೀಡಲಿಲ್ಲ ಎಂದರು.

ಈಗ ಧರ್ಮ-ಸಂಸ್ಕೃತಿ-ಪರಂಪರೆ ಬಗ್ಗೆ ಅರಿವಿರುವ ಡಿ.ಕೆ.ಶಿವಕುಮಾರ್ ಸಿಎಂ ಆಗಿದ್ದಾರೆ. ಅಷ್ಟೆ ಅಲ್ಲದೇ ಅವರು, ವೀರ ಗಂಗಾಧರ ಜಗದ್ಗುರುಗಳ ಹೆಸರಿನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಗಮನ ಹರಿಸುವ ಆತ್ಮವಿಶ್ವಾಸವಿದೆ ಎಂದರು.

ಅವರಿಗೆ ಧರ್ಮ-ಸಂಸ್ಕೃತಿ-ಪರಂಪರೆ ಬಗ್ಗೆ ವಿಶೇಷ ಒಲವು ಇದೆ. ಈಗ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದಾರೆ. ಇನ್ನು ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ವಿಸ್ತರಣೆ ಕೂಡ ಆಗಿಲ್ಲ. ಅವರು ಬಹಳಷ್ಟು ಒತ್ತಡದಲ್ಲಿ ಇರುವುದರಿಂದ ಅವರ ಸಂಪರ್ಕ ಸಾಧ್ಯವಾಗಿಲ್ಲ. ಇದೇ ಜುಲೈ 15 ರಿಂದ 5-6 ದಿನಗಳ ಕಾಲ ನಾವು ಬೆಂಗಳೂರಿನಲ್ಲೇ ಇರ್ತೀವಿ. ಆಗ ಬರುವ ಅವಕಾಶವಿದೆ ಎಂದರು. ಅವರಿಂದ ರಾಜ್ಯದ ಜನತೆಗೆ ಒಳ್ಳೆಯದಾಗಲಿ, ರೈತರ ಸಂಕಷ್ಟ ದೂರವಾಗಲಿ ಎಂದು ಸಿಎಂ ಡಿಕೆಶಿಗೆ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments