ಚಿಕ್ಕಮಗಳೂರು: ಲೇಟಾದ್ರೂ ಒಳ್ಳೆಯ ಫಲಿತಾಂಶ ಬಂದಿದೆ, ನನ್ನ ಅಳಿಯ, ಪತಿ ತುಂಬಾ ಸಹಕಾರ ನೀಡಿದರು ಎಂದು ಸುಪ್ರೀಂಕೋರ್ಟ್ ಆದೇಶದ ಬಳಿಕ ಗಾಯತ್ರಿ ಶಾಂತೇಗೌಡ ಅವರು ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಫಸ್ಟ್ ರಿಯಾಕ್ಷನ್
ಹಾಗೆ ನಾಮಿನಿ ಸದಸ್ಯರ ಓಟ್‌ಗಳನ್ನ ಮಿಕ್ಸ್ ಮಾಡಿ ಡಿಸಿ ಅವ್ರು ಹಾಕ್ಸಿದ್ರು ಒತ್ತಡ, ಅಧಿಕಾರದಿಂದ ಆ ರೀತಿ ಮಾಡಿದಿರಬಹುದು. ಅಧಿಕಾರಿಗಳ ಬಗ್ಗೆ ಮಾತಾಡೋಕೆ ತುಂಬಾವಿದೆ ಅನ್ಯಾಯ ಮಾಡಿದವರಿಗೆ ಒಳ್ಳೆಯದಾಗಲಿ ನನ್ನ ದುಡ್ಡು ಖರ್ಚಾಯ್ತು ನಿನ್ನ ದುಡ್ಡು ಖರ್ಚಾಯ್ತು ಅಕ್ಕ ಅಂತಾ ಹೇಳಿದ್ರು ಪ್ರಾಣೇಶ್ ಆದರೆ ಅನ್ಯಾಯ ಆಗಿರೋದ್ನ ನೋಡಿ ನಾಯಕರೇ ಸಚಿವ ಸ್ಥಾನ ಕೊಡಬಹುದು ಎಂದು ಹೇಳಿದರು.
ಸುಮಾರು ಮೂರೂವರೆ ವರ್ಷಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟದ ಬಳಿಕ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದ್ದು, ಗಾಯತ್ರಿ ಶಾಂತೇಗೌಡ ಕಾನೂನು ಹೋರಾಟದಲ್ಲಿ ಮೇಲುಗೈ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಕೈ ಪಡೆ ಕಾರ್ಯಕರ್ತರು.
