ಚಿಕ್ಕಮಗಳೂರು: ನೀಟ್ ಪರೀಕ್ಷೆಯಲ್ಲಿ ಚಿಕ್ಕಮಗಳೂರಿನ ನಗರದ ಸಾಯಿ ಏಂಜಲ್ಸ್ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. ಅದರಲ್ಲಿಯೂ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಷ್ಠ ಕಾಮತ್ -580 ಅಂಕ ಪಡೆದು ಜಿಲ್ಲಾ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ .ಮಿಥುನ್ -536 ಅಂಕ ಪಡೆದು
ದ್ವಿತೀಯ ಟಾಪರ್ ಆಗಿದ್ರೆ.. ರಕ್ಷಾ ಎಸ್- 499 . ವರ್ಷಿಣಿ ಕೆ ಗೌಡ : 492 (PwD) all india rank 97 ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಇನ್ನುಳಿದಂತೆ ವಾಸ್ತವಿ:486 , ಪ್ರೇರಣ ಗಂಗಾ: 478.ದರ್ಶನ್ ವಿ 471: ಶ್ರೇಯ ಕೆ ಎನ್: 451, ಶೋಭಾ ಡಿ ಎಸ್:446, ಪಲ್ಲವಿ ಹೆಚ್.ಟಿ:435,ಅಂಕಗಳನ್ನು ಪಡೆಯುವುದರ ಮೂಲಕ ಸತತ ಮೂರನೇ ವರ್ಷ ನೀಟ್ ಫಲಿತಾಂಶದಲ್ಲಿ ಜಿಲ್ಲಾ ಟಾಪರ್ ಆಗಿ ಹೊರಹೊಮ್ಮಿದೆ.
ಶ್ರೀಸಾಯಿ ಏಂಜಲ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಕಾಲೇಜಿನಿಂದಲೇ ನೀಟ್ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿತ್ತು. ಇಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅವಕಾಶವಿರಲಿಲ್ಲ. ನೀಟ್ ಪರೀಕ್ಷೆ ಮೊದಲ ಬಾರಿ ರದ್ದುಗೊಂಡು ಎರಡನೇ ಬಾರಿ ಬರೆಯುವಂತಾದದ್ದು ಮಕ್ಕಳಿಗೆ ಸವಾಲಿನ ವಿಷಯವಾಗಿತ್ತು.
ಹೀಗಾಗಿ ದ್ವಿತೀಯ ಪಿಯುಸಿ ಪರೀಕ್ಷೆಯೊಂದಿಗೆ ಎರಡನೇ ಬಾರಿಯ ನೀಟ್ ಪರೀಕ್ಷೆಗೂ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿದ್ದರು. ಇದರ ಪರಿಣಾಮವಾಗಿ ಮೊದಲ ಪ್ರಯತ್ನದಲ್ಲಿಯೇ ಸಾಯಿ ಏಂಜಲ್ಸ್ ಕಾಲೇಜಿನ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ
