Tuesday, July 21, 2026
Homeಜಿಲ್ಲಾಸುದ್ದಿಗೃಹಜ್ಯೋತಿ ಪರಿಷ್ಕರಣೆ ವೇಳೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮೆಸ್ಕಾಂ ಕಚೇರಿಗೆ ಭೇಟಿ,ಪರಿಶೀಲನೆ

ಗೃಹಜ್ಯೋತಿ ಪರಿಷ್ಕರಣೆ ವೇಳೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮೆಸ್ಕಾಂ ಕಚೇರಿಗೆ ಭೇಟಿ,ಪರಿಶೀಲನೆ

Telegram Group
Join Now

 ಕೊಪ್ಪ: ಹರಿಹರಪುರ ಮೆಸ್ಕಾಂ ಕಚೇರಿಗೆ ಕೊಪ್ಪ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಓಣಿತೋಟ ರತ್ನಾಕರ್ ಭೇಟಿ ನೀಡಿ ಗೃಹಜ್ಯೋತಿ ಪರಿಷ್ಕರಣೆ ನಡೆಯುತ್ತಿರುವ ಸಮಯದಲ್ಲಿ ಅಧಿಕಾರಿಗಳು ಫಲಾನುಭವಿಗಳ ಸಹಿ ಪಡೆಯುವಾಗ ಫಲಾನುಭವಿಗಳ ಸಹಿ ಜೊತೆಯಲ್ಲಿ ಕೊನೆಯಲ್ಲಿರುವ ನಮಗೆ ಗೃಹಜ್ಯೋತಿ ಯೋಜನೆ ಬೇಡ ಎಂಬ ಸ್ವಹ ಇಚ್ಛೆ ಕಾಲಂಗೆ ಫಲಾನುಭವಿಗಳ ಸಹಿ ಪಡೆಯುವುದನ್ನು ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹೌದು .. ಇಂದು (21/7/26)  ಮಂಗಳವಾರ ಬೆಳಗ್ಗೆ ಮೆಸ್ಕಾಂ ಕಚೇರಿಗೆ ಭೇಟಿ ನೀಡಿದ ಅವರು, ಇನ್ನು ಮುಂದೆ ಈ ರೀತಿ ಬೇಜವಾಬ್ದಾರಿಯಾಗಿ ವರ್ತಿಸಿದರೆ ಮೇಲಾಧಿಕಾರಿಗಳ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಹಾಗೆ ಈ ದಿನ ಸಹಿ ಪಡೆದ ಅರ್ಜಿಗಳಲ್ಲಿ 10-12 ಅರ್ಜಿಗಳಲ್ಲಿ ಎರಡು ಸಹಿ ಪಡೆದಿದ್ದನ್ನು ವೈಟ್ನೆರ್ ಹಾಕಿಸಿ ಅಳಿಸಿ ಈ ಹಿಂದೆ ತೆಗೆದುಕೊಂಡ ಅರ್ಜಿಗಳನ್ನು ಪರಿಶೀಲನೆ ಮಾಡಿ ಅಂತ ಸಹಿ ಇದ್ದರೆ ವೈಟ್ನರ್ ಹಾಕುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ನರೇಂದ್ರ ಶೆಟ್ಟಿ, ಸಂತೋಷ್ ಕುಲಾಸೋ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments