Wednesday, July 22, 2026
Homeಕ್ರೈಮ್ಕೊಪ್ಪದಲ್ಲಿ ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ: ಸ್ಥಳೀಯರ ತೀವ್ರ ಆಕ್ರೋಶ!

ಕೊಪ್ಪದಲ್ಲಿ ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ: ಸ್ಥಳೀಯರ ತೀವ್ರ ಆಕ್ರೋಶ!

Telegram Group
Join Now

ಕೊಪ್ಪ:  ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು ಮತ್ತೊಂದು ಬಲಿ ಪಡೆದಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ  ಕೊಪ್ಪ ತಾಲೂಕಿನ ದಯಂಬಳ್ಳಿ ಗ್ರಾಮದ ದೋಣಿಹಡ್ಲು ಎಂಬಲ್ಲಿ ನಡೆದಿದೆ.

ಮೃತರನ್ನು ಮಂಜುನಾಥ್ (45) ಎಂದು ಗುರುತಿಸಲಾಗಿದೆ.  ಅವರು ತೋಟದಲ್ಲಿ ಕೆಲಸ ನಿರ್ವಹಿಸಿ ಮನೆಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯ ಏಕಾಏಕಿ ಕಾಡುಕೋಣ ದಾಳಿ ನಡೆಸಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.

ಕೇವಲ 15 ದಿನಗಳ ಅಂತರದಲ್ಲಿ ಇದು ಎರಡನೇ ಬಲಿಯಾಗಿದ್ದು ಕಳೆದ ಜುಲೈ 7ರಂದು ಕಳಸ ತಾಲೂಕಿನಲ್ಲಿ ಮಹಿಳ ಒಬ್ಬರಿಗೆ ಅಟ್ಯಾಕ್‌ ಮಾಡಿ ತೀರಿಕೊಂಡಿದ್ದರು.

ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಶಾಶ್ವತ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments