ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜನರೇ ಈ ಸುದ್ದಿ ನಿಮಗಾಗಿ. ಮತ ಹಾಕದೆ ಯಾರಾದ್ರೂ ಮೈಸೂರು ಅರಮನೆ ನೋಡಲು ಹೋದ್ರೆ ಹುಷಾರಾಗಿರಿ. ಯಾಕಂದ್ರೆ ಮೈಸೂರಿನ ಜಿಲ್ಲಾಧಿಕಾರಿ ಡಾಕ್ಟರ್ ರಾಜೇಂದ್ರ ಅವ್ರು ಒಂದು ಮಹತ್ವದ ಆದೇಶವನ್ನ ಹೊರಡಿಸಿದ್ದಾರೆ. ಅದೇನಂದ್ರೆ ಯಾರೆಲ್ಲ ಏಪ್ರಿಲ್ 26 ಕ್ಕೆ ಮತ ಹಾಕದೆ ,ಅಂದ್ರೆ ವೋಟ್ ಮಾಡದೇ ಅರಮನೆ ನೋಡಲು ಬರ್ತಾರೋ, ಅವ್ರಿಗೆ ಪ್ಯಾಲೇಸ್ ಒಳಗಡೆ ಪ್ರವೇಶವಿಲ್ಲ. ಏಪ್ರಿಲ್ 26 ಕ್ಕೆ ಮಾತ್ರ ಈ ನಿಯಮವಿದ್ದು , ಮೈಸೂರಿನ 14 ಲೋಕಸಭಾ ವ್ಯಾಪ್ತಿಯ ಮತದಾರರಿಗೆ ಮಾತ್ರ ಈ ಆದೇಶ ಅನ್ವಯವಾಗಲಿದೆ. ಇನ್ನು ರಜಾ ಇರೋದ್ರಿಂದ ಬೇರೆ ಬೇರೆ ರಾಜ್ಯಗಳಿಂದ ಬರೋ ಜನ್ರಿಗೆ ಈ ಆದೇಶ ಅನ್ವಯವಾಗೋದಿಲ್ಲ. ಹೀಗಾಗಿ ವೋಟ್ ಮಾಡಿದ ನಂತ್ರ , ಆರಾಮಾಗಿ ನೀವು ಅರಮನೆ ನೋಡಿ ಎಂಜಾಯ್ ಮಾಡಬಹುದು. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಯ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮೈಸೂರು ಲೋಕಸಭಾ ಕ್ಷೇತ್ರದ ಜನ್ರಿಗೆ ಅರಮನೆಗೆ ನೋ ಎಂಟ್ರಿ..!
RELATED ARTICLES