Monday, August 10, 2026
Homeಜಿಲ್ಲಾಸುದ್ದಿಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಅಧ್ಯಕ್ಷರಾಗಿ ಸಿ. ಬಿ.ಶಂಕರ್ ಗೌಡ ನೇಮಕ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಅಧ್ಯಕ್ಷರಾಗಿ ಸಿ. ಬಿ.ಶಂಕರ್ ಗೌಡ ನೇಮಕ

Telegram Group
Join Now

ಮೂಡಿಗೆರೆ : ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಪಟ್ಟಣದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮೂಡಿಗೆರೆ ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಅದರ ಅಧ್ಯಕ್ಷರಾಗಿ ಸಿ.ಬಿ. ಶಂಕರ್ ಗೌಡ ಚಿಕ್ಕಳ್ಳ ಅವರನ್ನು ನೇಮಕ ಮಾಡಲಾಗಿದೆ.

ಕಾರ್ಯಕ್ರಮ ಉದ್ದೇಶಿಸಿ ಹಿರಿಯ ಕಾಂಗ್ರೆಸ್ ಮುಖಂಡ ಸಂಪತ್ ಬಿಳಗುಳ ಮಾತನಾಡಿ ಅಧಿಕಾರ ಹಸ್ತಾಂತರ ಸಹಜ ಬದಲಾವಣೆ ಎಂಬುದು ಪಕ್ಷದ ಪದ್ಧತಿಯಾಗಿದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಶಂಕರ್ ಕಾಂಗ್ರೆಸ್ ಪಕ್ಷದಲ್ಲಿ ಆನೇಕ ಜವಾಬ್ದಾರಿ ಸ್ವೀಕರಿಸಿ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದು ಇಂದು ಹಿರಿಯರ ಕಿರಿಯರ ಸಹಕಾರದಿಂದ ಮತ್ತೊಂದು ಜವಾಬ್ದಾರಿ ಹೆಗಲ ಮೇಲೆ ಹೊತ್ತುಕೊಂಡಿದ್ದು ಹಿಂದೆ ನಿಭಾಯಿಸಿದಂತೆ ಸಾರ್ವಜನಿಕ ಬಂದುಗಳ ಸಮಾಸಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಭರವಸೆ ವ್ಯಕ್ತ ಪಡಿಸಿದರು

ನೂತನ ಅಧ್ಯಕ್ಷರಿಗೆ ಶುಭ ಹಾರೈಸಿ ಹಿರಿಯ ಕಾಂಗ್ರೆಸ್ ಮುಖಂಡರು ಉದ್ಯಮಿಗಳಾದ ಶ್ರೀ ಮಂಚೇಗೌಡ ಮಾತನಾಡಿ ಅಧ್ಯಕ್ಷ ಸ್ಥಾನ ಕ್ಷಣಿಕವಾಗಿದ್ದು ಅಧಿಕಾರವದಿಯಲ್ಲಿ ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ ಪಕ್ಷದ ಏಳಿಗೆಗೆ ಸುಮಾರು ಮೂವತ್ತು ವರ್ಷಗಳಿಂದ ಶ್ರಮಿಸುತ್ತಿರುವ ಶಂಕರ್ ಅವರ ಕಾರ್ಯ ವೈಖರಿ ಶ್ಲಾಘನೀಯ, ಉತ್ತಮ ಸೇವೆಯೊಂದಿಗೆ ಸಾರ್ವಜನಿಕರಿಗೆ ಧ್ವನಿಯಾಗಿ ಕೆಲಸ ಮಾಡುವ ಛಲ ಇವರಲಿದ್ದು ಆನೇಕ ಜವಾಬ್ದಾರಿಗಳನ್ನು ನಿಭಾಯಿಸಿರುವ ಇವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಜವಾಬ್ದಾರಿಯನ್ನು ಕೂಡ ಅತ್ಯಂತ ಮಾದರಿಯಾಗಿ ನಿಭಾಯಿಸಲಿದ್ದಾರೆ ಎಂದರು

ನೂತನ ಜವಾಬ್ದಾರಿ ಸ್ವೀಕರಿಸಿ ಮಾತನಾಡಿದ ಸಿ. ಬಿ. ಶಂಕರ್ ಯುವ ಕಾರ್ಯಕರ್ತರನ್ನು ಪೋಷಿಸಿ, ಬೆಳೆಸುವುದರ ಕೆಲಸ ಮಾಡಿಕೊಂಡು ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನನಗೆ ಸಾಂವಿಧಾನಿಕ ಜವಾಬ್ದಾರಿ ನೀಡಿದ್ದು. ರಾಜಕೀಯ ಗುರುಗಳು ಶ್ರೀಮತಿ ಮೋಟಮ್ಮ ಹಾಗೂ ಹಾಲಿ ಶಾಸಕಿ ನಯನ ಮೋಟಮ್ಮ ಅವರು ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿವುದಾಗಿ ತಿಳಿಸುದರು.. ರಾಜಕೀಯದಲ್ಲಿ ಏಳು ಬೀಳುಗಳಲ್ಲಿ ಜೊತೆಗಿದ್ದ ಮುಖಂಡರನ್ನು ಸ್ಮರಿಸಿದ ಇವರು.. ಆನೇಕ ರಾಜಕೀಯ ವಿಚಾರಗಳ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡರು. ಸರ್ವ ಸದಸ್ಯರ ಬೆಂಬಲ, ಸಹಕಾರ, ಮಾರ್ಗದರ್ಶನ ಪಡೆದು ಸಾರ್ವಜನಿಕರ ಸಮಾಸಸ್ಯೆಗಳನ್ನು ಬಗೆ ಹರಿಸುವುದಾಗಿ ತಿಳಿಸಿದರು

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ರಮೇಶ್ ಹೊಸಕೆರೆ, ಹರ್ಷ ಮೇಲ್ವಿನ್,ಚಂದ್ರಯ್ಯ, ಗುರುವಪ್ಪ, ನಾರಾಯಣ, ಶ್ರೀನಿವಾಸ್,ನವೀನ್, ಶಿವಸಾಗರ್, ಲೀಲಾವತಿ,ದೀಕ್ಷಿತ್ ಹಾಲೂರು,ಭರತ್, ಜಯಮ್ಮ,ಅರುಣ್ ಗುತ್ತಿ, ಇರ್ಫಾನ್ ಬಣಕಲ್ ಅವರನ್ನು ಆಯ್ಕೆ ಮಾಡಲಾಗಿದೆ.ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ವೇದಿಕೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುಬ್ರಾಯ ಗೌಡ,ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ಯಾಕೂಬ್ ಗೋಣಿಗದ್ದೆ, ಕೆಡಿಪಿ ಸದಸ್ಯ ಸುರೇಂದ್ರ ಉಗ್ಗೇಹಳ್ಳಿ,. ಸುರೇಂದ್ರ ಚಕ್ರಮಣಿ, ನಗರ ಅಧ್ಯಕ್ಷ ಸುರೇಶ್, ಶ್ರೀನಿವಾಸ್, ರವಿ ಕುನ್ನಹಳ್ಳಿ ಸುಬ್ರಮಣ್ಯ ತ್ರಿಪುರ ಹಾಗೂ ಕಾಂಗ್ರೆಸ್ ಮುಖಂಡರಾದ ರಘು ಮಗ್ಗಲಮಕ್ಕಿ, ಚಂದ್ರು ಒಡೆಯರ್, ಹೂವಮ್ಮ , ದೀಪಕ್ ಕಡಿದಾಳು, ಯುವ ಮುಖಂಡರಾದ ಆರ್ಯ ಪಟೇಲ್, ಶುಭೋತ್, ರೋಹಿತ್ ಹೊಸಳ್ಳಿ,,ನಿಶಾಂತ್ ಸತ್ತಿಗನಹಳ್ಳಿ ಗೌತಮ್ ಬೆಟ್ಟಗೆರೆ, ತಿಲಕ್ ಸತ್ತಿಗನಹಳ್ಳಿ, ಶ್ರೀನಿವಾಸ್ ಗೌಡಹಳ್ಳಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ:ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments