Sunday, August 23, 2026
Homeಜಿಲ್ಲಾಸುದ್ದಿಮೂಡಿಗೆರೆಯಲ್ಲಿ ಸೆಪ್ಟೆಂಬರ್ 4ರಂದು ಎರಡನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ

ಮೂಡಿಗೆರೆಯಲ್ಲಿ ಸೆಪ್ಟೆಂಬರ್ 4ರಂದು ಎರಡನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ

Telegram Group
Join Now

ಮೂಡಿಗೆರೆ:ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ವತಿಯಿಂದ ಎರಡನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಸೆಪ್ಟೆಂಬರ್ 4 ರಂದು ಮೂಡಿಗೆರೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಕ ಸಾ ಪ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಿರ್ಮಲಾ ಮಂಚೇಗೌಡ ಹೇಳಿದರು ಅವರು ಶನಿವಾರ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಭಾಗ್ಯ ಲಕ್ಷ್ಮಣಗೌಡ ಅವರನ್ನ ಚಕ್ಕುಡಿಗೆಯ ಅವರ ನಿವಾಸದಲ್ಲಿ ಕ ಸಾ ಪ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮಹಿಳಾ ಘಟಕ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಮಹಿಳೆಯರಲ್ಲಿ ಇರುವ ಸಾಹಿತ್ಯಾಸಕ್ತಿಯನು ಸಮಾಜದ ಮೊನ್ನೆಲೆಗೆ ತರುವ ದೃಷ್ಟಿಯಿಂದ ಜಿಲ್ಲಾ ಮಟ್ಟದ ಮಹಿಳಾ ಸಮ್ಮೇಳನ ಆಯೋಜಿಸಲಾಗುತಿದೆ ಸಮ್ಮೇಳನ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ನಡೆಯಲಿದ್ದು ಹಲವು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಮ್ಮ ತಾಲ್ಲೂಕಿನವರೇ ಆಗಿರುವ ಭಾಗ್ಯ ಲಕ್ಷ್ಮಣ್ ಗೌಡ ಸಮ್ಮೇಳನದ ಅಧ್ಯಕ್ಷರಾಗಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಈ ಸಮ್ಮೇಳನದ ಯಶಸ್ವಿಗೆ ಎಲ್ಲಾ ಸಾಹಿತ್ಯ ಆಸಕ್ತರ ಮತ್ತು ತಾಲ್ಲೂಕಿನ ಜನತೆಯ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು .

ಕ ಸಾ ಪ ಜಿಲ್ಲಾ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಮಹಿಳಾ ಘಟಕದ ವತಿಯಿಂದ ಇದು ಎರಡನೇ ಸಮ್ಮೇಳನವಾಗಿದೆ ಈ ಸಮ್ಮೇಳನ ದ ಉದ್ಘಾಟನೆ ಯನ್ನು ಮೈಸೂರಿನ ಉಪನ್ಯಾಸಕಿ ಡಾ.ಲತಾ ರಾಜಶೇಖರ್ ಅವರು ನೆರವೇರಿಸಲಿದ್ದಾರೆ ಹಾಗೆ ಸಮಾರೋಪ ದಲ್ಲಿ ಅಂಕಣಕರರಾದ ದೀಪ ಹಿರೇಗುತ್ತಿ ಉಪಸ್ಥಿತರಿರುತಾರೆ ಸಮ್ಮೇಳನದಲ್ಲಿ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಸ್ತ್ರೀ ಎಂದರೆ ಇಷ್ಟೇ ಸಾಕೆ ಎನ್ನುವ ಗೋಷ್ಠಿಯನ್ನು ಜಿಲ್ಲಾ ಪಂಚಾಯಿತಿ ಸಿ ಈ ಓ ಕೀರ್ತನ ಉದ್ಘಾಟಿಸಲಿದ್ದಾರೆ ಇದರೊಂದಿಗೆ ದಕ್ಷಿಣ ಭಾರತದ ಖ್ಯಾತ ಹಿನ್ನಲೆ ಗಾಯಕಿ ಎಸ್ ಜಾನಕಿ ಅವರಿಗೆ ನುಡಿ ನಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಜಿಲ್ಲೆಯಲ್ಲಿ ಉತ್ಸಾಹದಿಂದ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಒಂದೊಂದು ತಾಲ್ಲೂಕುಗಳಿಂದ ಇಬ್ಬಿಬರನ್ನು ಆಯ್ಕೆ ಮಾಡಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಲಾಗುವುದು ಜೊತೆಗೆ ಜಿಲ್ಲೆಯಲ್ಲಿ ಉತ್ತಮವಾಗಿ ಮಹಿಳಾ ಘಟಕದ ಕೆಲಸ ಮಾಡುತ್ತಿದೆ ಎಂದರೆ ಅದಕ್ಕೆ ಅಧ್ಯಕ್ಷರುಗಳೆ ಕಾರಣ ಹಾಗಾಗಿ ಎಲ್ಲಾ ತಾಲ್ಲೂಕ್ ಅಧ್ಯಕ್ಷರಿಗೆ ಕನ್ನಡ ಶ್ರೀ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕ ಸಾ ಪ ತಾಲ್ಲೂಕು ಅಧ್ಯಕ್ಷ ಡಿ ಕೆ ಲಕ್ಷ್ಮಣ್ ಗೌಡ, ತಾ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ರವಿರಾಜ್, ಪವಿತ್ರ ಸುಜೇಂದ್ರ, ಲೇಖಕರ ಬಳಗದ ತಾಲ್ಲೂಕ್ ಅಧ್ಯಕ್ಷೆ ಪ್ರೇಮ, ಜ್ಯೋತಿ ಮತ್ತಿತರರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments