Sunday, August 23, 2026
Homeಜಿಲ್ಲಾಸುದ್ದಿಎತ್ತಿನಭುಜ ಟ್ರೆಕ್ಕಿಂಗ್‌ಗೆ ಬಂದ ಪ್ರವಾಸಿಗರ ಪರದಾಟ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ! Video Viral

ಎತ್ತಿನಭುಜ ಟ್ರೆಕ್ಕಿಂಗ್‌ಗೆ ಬಂದ ಪ್ರವಾಸಿಗರ ಪರದಾಟ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ! Video Viral

Telegram Group
Join Now

ಚಿಕ್ಕಮಗಳೂರು:  ಮೂಲಭೂತ ಸೌಕರ್ಯಗಳಿಲ್ಲದೆ, ಯಾವುದೇ ಮುಂಜಾಗ್ರತಾ ಕ್ರಮವಹಿಸದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್ ಮಾಡಲಾಗಿದೆ.

ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿಕೊಂಡು ಬಂದ ಪ್ರವಾಸಿಗರು, ಹೋಗುವ ರಸ್ತೆ ತಿಳಿಯದೆ ದಟ್ಟ ಕಾಡಿನಲ್ಲಿ ಪರದಾಡಿದ್ದಾರೆ. ಗೈಡ್‌ಗಳಿಲ್ಲದೇ ಇರುವುದರಿಂದ ಪ್ರವಾಸಿಗರು ವಾಪಸ್‌ ಆಗುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಲ್ಲದೇ ಅರಣ್ಯ ಇಲಾಖೆ ಟ್ರೆಕ್ಕಿಂಗ್‌ ಓಪನ್‌ ಮಾಡಿದ್ದಕ್ಕೆ ಪ್ರವಾಸಿಗರು ಆಕ್ರೋಶ ಹೊರಹಾಕಿದ್ದಾರೆ.

ಕಳೆದ ಹಲವು ತಿಂಗಳಿನಿಂದ ಬಂದ್ ಆಗಿದ್ದ ಚಾರಣವನ್ನು ಇದೀಗ ಯಾವುದೇ ಮುಂಜಾಗ್ರತಾ ಕ್ರಮವಹಿಸದೆ ಆನ್ಲೈನ್ ನಲ್ಲಿ ಟ್ರೆಕ್ಕಿಂಗ್ ಓಪನ್ ಆಗಿದ್ದು, 5 ಕಿಮೀ ಚಾರಣಕ್ಕೆ 300 ರೂಪಾಯಿ ನಿಗದಿ ಮಾಡಲಾಗಿದೆ. ಆದರೆ, ಆನ್ಲೈನ್ ನಲ್ಲಿ ಟ್ರೆಕ್ಕಿಂಗ್ ಬುಕ್ ಮಾಡಿಕೊಂಡು ಬಂದ ಪ್ರವಾಸಿಗರಿಗೆ ನರಕದರ್ಶನವಾಗಿದೆ.

ಹೌದು…SOP ಪಾಲನೆ ಮಾಡದೆ ಗೈಡ್ ಸೇರಿದಂತೆ ಯಾವುದೇ ಸೌಕರ್ಯಗಳಿಲ್ಲ. ಅಲ್ಲದೇ ತುಂಬಾ ಮರಗಳು ಬಿದ್ದು ಟ್ರಕ್ಕಿಂಗ್ ಹೋಗುವ ಮಾರ್ಗ ಬ್ಲಾಕ್ ಆಗಿದೆ. ಇದರಿಂದ ಬುಕ್ ಮಾಡಿಕೊಂಡು ಬಂದ ಪ್ರವಾಸಿಗರು ದಟ್ಟ ಕಾಡಿನಲ್ಲಿ ದಾರಿ ಸಿಗದೇ ಪರದಾಡುವಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments