Monday, August 10, 2026
Homeರಾಜಕೀಯನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡ ರಾಮಚಂದ್ರ ಮನೆ ಮೇಲೆ ರೇಡ್ , ಮದ್ಯ ವಶ

ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡ ರಾಮಚಂದ್ರ ಮನೆ ಮೇಲೆ ರೇಡ್ , ಮದ್ಯ ವಶ

Telegram Group
Join Now

ಬೆಂಗಳೂರು; ನಟಿ ಅಮೂಲ್ಯ ಅವರ ಮಾವ , ಮಾಜಿ ಕಾರ್ಪೊರೇಟರ್ , ಬಿಜೆಪಿ ಮುಖಂಡ ರಾಮಚಂದ್ರ ಮನೆ ಮೇಲೆ ಚುನಾವಣಾ ಅಧಿಕಾರಿಗಳು ನಿನ್ನೆ ತಡ ರಾತ್ರಿ ರೇಡ್ ಮಾಡಿದ್ದಾರೆ. ಸುಮಾರು 10 ಗಂಟೆ ಸುಮಾರಿಗೆ ಆರ್ ಆರ್ ನಗರದಲ್ಲಿರುವ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ .

ಮೂಲಗಳ ಪ್ರಕಾರ ಸುಮಾರು 4 ಗಂಟೆಗಾಲ ಕಾಲ ಶೋಧ ಕಾರ್ಯಾ ನಡೆದಿದ್ದು, ಕೆಲವು ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆ. ದಾಳಿ ಮಾಹಿತಿ ಪಡೆದು , ಬಿಜೆಪಿ ಕಾರ್ಯಕರ್ತರು ಮನೆ ಬಳಿ ಜಮಾಯಿಸಿ , ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ರು.ಅಲ್ಲದೆ “ಚೊಂಬು ಸಿಗ್ತಾ ಚೊಂಬು – ಡಿಕೆ ಚೊಂಬು ” ಅಂತ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ದಾಳಿ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ರಾಮಚಂದ್ರ , ಕಾಂಗ್ರೆಸ್ ಸರ್ಕಾರ ಅಧಿಕಾರವನ್ನ ದುರುಪಯೋಗಪಡಿಸಿಕೊ೦ಡು ದಾಳಿ ಮಾಡಿದೆ. ಕಾಂಗ್ರೆಸ್ ಈ ಭಾಗದಲ್ಲಿ ಹಣ ಹಂಚಲು ಬಂದಿತ್ತು. ಅದನ್ನು ನಾವು ತಡೆಯುತ್ತೇವೆ ಅಂತ ಗೊತ್ತಾಗಿ, ನಮ್ಮ ಮನೆ ಮೇಲೆ ದಾಳಿ ಮಾಡಿಸಿದೆ ಅಂತ ಹೇಳಿದ್ರು.

ಏನೋ ದೊಡ್ಡದಾಗಿ ಸಿಗುತ್ತೆ ಅಂತ ಅಧಿಕಾರಿಗಳು ಕೂಲ್ ಆಗಿ ಬಂದು, ಹಾಟ್ ಆಗಿ ಹೋಗಿದ್ದಾರೆ ಅಂತ ವ್ಯಂಗ್ಯ ವಾಡಿದ್ರು. ಮೊಮ್ಮಕ್ಕಳ ಹುಟ್ಟುಹಬ್ಬ ಆಚರಣೆಗೆ ಲಿಕ್ಕರ್ ತರಿಸಿ ಮನೆಯಲ್ಲಿಟ್ಟಿದ್ದೆ. ಅದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಅಂತ ಹೇಳಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments