Wednesday, August 26, 2026
Homeಜಿಲ್ಲಾಸುದ್ದಿಲಕ್ಷ್ಮಿ ಎಜುಕೇಷನಲ್ ಏಡ್ ಫೌಂಡೇಷನ್ ವತಿಯಿಂದ 10ನೇ ತರಗತಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ!

ಲಕ್ಷ್ಮಿ ಎಜುಕೇಷನಲ್ ಏಡ್ ಫೌಂಡೇಷನ್ ವತಿಯಿಂದ 10ನೇ ತರಗತಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ!

Telegram Group
Join Now

ಜಯಪುರ : ಬೆಂಗಳೂರಿನ ಲಕ್ಷ್ಮಿ ಎಜುಕೇಷನಲ್ ಏಡ್ ಫೌಂಡೇಷನ್ ವತಿಯಿಂದ ಹತ್ತನೇ ತರಗತಿ ಮಕ್ಕಳಿಗೆ ವಿಜ್ಞಾನ ಹಾಗೂ ಗಣಿತ ಕಲಿಕೆ ಹಾಗೂ ಪರೀಕ್ಷೆಗೆ ಅನುಕೂಲವಾಗಲೆಂದು ಮಾರ್ಗಸೂಚಿ ಪುಸ್ತಕವನ್ನು ಪ್ರತಿವರ್ಷದಂತೆ ಈ ವರ್ಷವೂ ಲೋಕನಾಥಪುರ, ಹೇರೂರು, ಕೊಗ್ರೆ-ಶಾಂತಿಗ್ರಾಮ, ಅಗಳಗಂಡಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಲಕ್ಷ್ಮಿ ಎಜುಕೇಷನಲ್ ಏಡ್ ಫೌಂಡೇಷನ್ ಸಂಸ್ಥೆಯ ಸದಸ್ಯರಾದ ನಂದಿನಿ ಮಹೇಶ್, ಗಜಾನನ ಗಣೇಶ್, ಸ್ವರ್ಣಮೇದಿನಿ ಸಿನಿಮಾದ ನಿರ್ದೇಶಕರಾದ ಪ್ರದೀಪ್ ಹೆಬ್ಬಾರ್, ಸಾಮಾಜಿಕ ಕಾರ್ಯಕರ್ತ ಇಂದ್ರಾಜ್, ಪ್ರೌಢ ಶಾಲೆಗಳ ಶಿಕ್ಷಕವೃಂದದವರು ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments