ಬೇಸಿಗೆ ಕಾಲದಲ್ಲಿ ಜನ್ರು ಹೆಚ್ಚು ಅನಾರೋಗಕ್ಕೆ ಒಳಗಾಗುತ್ತಾರೆ. ಭಾರತದಲ್ಲಿ ಬೇಸಿಗೆಯು ಅತಿ ದೀರ್ಘವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಬೇಸಿಗೆಯು ಅದರೊಂದಿಗೆ ಅನೇಕ ರೋಗಗಳನ್ನು ತರುತ್ತದೆ. ಬೇಸಿಗೆಯಲ್ಲಿ, ತಾಪಮಾನವು ಹೆಚ್ಚಾಗೋದ್ರಿಂದ ಹಸಿವೂ ಕಡಿಮೆಯಾಗುತ್ತದೆ .ಅನೇಕ ಜನರು ಬೇಸಿಗೆಯಲ್ಲಿ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಲ್ಲ .ಇದರಿಂದಾಗಿ ಅವರು ಹಲವಾರು ರೋಗಗಳಿಗೆ ಗುರಿಯಾಗುತ್ತಾರೆ. ಆದರೆ ನಾವು ಎಚ್ಚರಿಕೆ ಮತ್ತು ಜಾಗರೂಕತೆಯಿಂದ ಇದ್ದರೆ, ಈ ರೋಗಗಳನ್ನು ತಪ್ಪಿಸಬಹುದು.

ದೇಹದಲ್ಲಿ ನೀರಿನ ಕೊರತೆ
ಅನೇಕ ಜನರು ಬೇಸಿಗೆಯಲ್ಲಿ ಕಡಿಮೆ ನೀರು ಕುಡಿಯುತ್ತಾರೆ .ಇದರಿಂದಾಗಿ ಅವರು ಡಿಹೈಡ್ರೆಷನ್ ಸಮಸ್ಯೆಯನ್ನ ಎದುರಿಸಬೇಕಾಗುತ್ತೆ. ಆದ್ದರಿಂದ, ಬೇಸಿಗೆಯಲ್ಲಿ, ನಾವು ಕನಿಷ್ಠ 4 – 5 ಲೀಟರ್ ನೀರನ್ನು ಕುಡಿಯಬೇಕು. ಹೆಚ್ಚು ನೀರು ಕುಡಿಯಲು ಇಷ್ಟವಿಲ್ಲದಿದ್ದರೆ ನೀವು ತಿನ್ನೋ ಆಹಾರದಲ್ಲಿ ಜ್ಯೂಸ್ ಗಳೊಂದಿಗೆ, ಸೀಸ್ನಲ್ ಹಣ್ಣುಗಳನ್ನು ಸಹ ಸೇರಿಸಬಹುದು. ಕಲ್ಲಂಗಡಿ, ಸೌತೆಕಾಯಿ, ಮಸ್ಕ್ ಮೆಲನ್ ಇತ್ಯಾದಿಗಳಲ್ಲಿ ನೀರಿನ ಪ್ರಮಾಣವು ಹೆಚ್ಚಾಗಿರುತ್ತೆ. ಇವುಗಳನ್ನ ಸೇವಿಸಿದ್ರೆ, ನಿಮ್ಮ ದೇಹದಲ್ಲಿ ನೀರಿನ ಮಟ್ಟವು ಹಾಗೇ ಉಳಿಯುತ್ತದೆ.ಅಲ್ಲದೆ ಗ್ರೀನ್ ಟೀ ಮತ್ತು ವಿವಿಧ ರೀತಿಯ ಮಿಲ್ಕ್ ಶೇಕ್ ಗಳನ್ನೂ ಸಹ ಸೇವಿಸಬಹುದು. ನಮ್ಮ ದೇಹವು 70% ನೀರಿನಿಂದ ಕೂಡಿದೆ. ಬೇಸಿಗೆಯಲ್ಲಿ ಬಿಸಿಯಾದ ತಾಪಮಾನದಿಂದಾಗಿ, ಸಾಕಷ್ಟು ನೀರು ಬೆವರಿನ ರೂಪದಲ್ಲಿ ದೇಹದಿಂದ ಹೊರಹೋಗುತ್ತದೆ. ಹೀಗಾಗಿ ನಾವು ಕಡಿಮೆ ನೀರು ಕುಡಿದರೆ, ನಮ್ಮ ದೇಹದಿಂದ ಬೆವರು ಕಡಿಮೆಯಾಗಿ, ಜೀವಾಣುಗಳು ನಮ್ಮ ದೇಹದೊಳಗೆ ಹಾಗೇ ಉಳಿಯುತ್ತವೆ. ಇದ್ರಿಂದ ನಮಗೆ ಇನ್ನು ಹೆಚ್ಚು ಸೆಕೆಯಾಗ್ತಾ ಇರುತ್ತದೆ. ಹೀಗಾಗಿ ಆದಷ್ಟು ನೀರಿನ ಸೇವನೆ ಮಾಡ್ತಾ ಇರಿ .

ಜಾಸ್ತಿ ತಿನ್ನಬೇಡಿ
ಬೇಸಿಗೆಯಲ್ಲಿ, ನಾವು ಯಾವಾಗಲೂ ಲಘು ಮತ್ತು ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಬೇಕು. ಏನೂ ಯೋಚಿಸದೆ ಎಲ್ಲವನ್ನು ಬಡಿದು ಬಾಯಿಗೆ ಹಾಕ್ಕೊಳೋ ಜನರು, ದಿನವಿಡೀ ಸೋಮಾರಿತನವನ್ನು ಅನುಭವಿಸುತ್ತಾರೆ. ಇದರೊಂದಿಗೆ, ನಿಮ್ಮ ದೇಹ ಮತ್ತು ಮೆದುಳಿನಲ್ಲಿ ಭಾರವಿರುತ್ತದೆ ಮತ್ತು ನಿಮಗೆ ಇಡೀ ದಿನ ನಿದ್ರೆ ಬರುತ್ತದೆ. ಆಹಾರವನ್ನು ಸೇವಿಸಿದ ತಕ್ಷಣ ಮಲಗಬೇಡಿ, ಇದ್ರಿಂದ ನಿಮ್ಮ ಹೊಟ್ಟೆ ಹೊರಬರುತ್ತದೆ ಮತ್ತು ತೂಕವು ತುಂಬಾ ವೇಗವಾಗಿ ಹೆಚ್ಚಾಗುತ್ತದೆ.ಬೇಸಿಗೆಯಲ್ಲಿ, ಆಹಾರ ಸೇವಿಸಿದ ತಕ್ಷಣ ಸ್ವಲ್ಪ ಸಮಯ ನಡೆಯಬೇಕು .ಇದರಿಂದ ಆಹಾರವು ಜೀರ್ಣವಾಗುತ್ತದೆ. ಸೌತೆಕಾಯಿ, ಈರುಳ್ಳಿ, ಟೊಮೆಟೊ, ನಿಂಬೆ ರಸವನ್ನು ಬೆರೆಸಿ ಸಲಾಡ್ ತಯಾರಿಸಿ ಸೇವಿಸಿದ್ರೆ, ಹೀಟ್ ಸ್ಟ್ರೋಕ್, ಡೈಜೇಶನ್ ಸಮಸ್ಯೆ ಮುಂತಾದ ರೋಗಗಳನ್ನು ತಪ್ಪಿಸಬಹುದು. ಹಾಗೆ ಈರುಳ್ಳಿಯನ್ನು ನಿರ್ಲಕ್ಷಿಸಬೇಡಿ. ಈರುಳ್ಳಿ ತಿನ್ನುವುದರಿಂದ, ದೇಹದ ತಾಪಮಾನವು ಕಡಿಮೆ ಇರುತ್ತದೆ. ಇದು ಜೀರ್ಣಶಕ್ತಿಯನ್ನ ಸುಧಾರಿಸುವುದಲ್ಲದೇ ಮಲಬದ್ಧತೆಯನ್ನೂ ನಿವಾರಿಸುತ್ತದೆ. ಮಧುಮೇಹ ಇರುವವರಿಗೆ, ಈರುಳ್ಳಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತದೆ.