ಬೆಂಗಳೂರು; ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಸ್‌ಐಟಿ ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ಹೀಗಿರುವಾಗಲೇ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಶಾಸಕ ಹೆಚ್ ಡಿ ರೇವಣ್ಣ ಅವರಿಗೆ ಎಸ್ ಐಟಿ ಸಮನ್ಸ್ ಜಾರಿ ಮಾಡಿದೆ.
ಪ್ರಜ್ವಲ್ ಗೆ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ರೆ,ನಾಳೆ ವಿಚಾರಣೆಗೆ ಹಾಜರಾಗುವಂತೆ ಹೆಚ್.ಡಿ ರೇವಣ್ಣಗೆ ಸೂಚನೆ ನೀಡಲಾಗಿದೆ.ಬೆಂಗಳೂರಿನ ಸಿಐಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಸದ್ಯ ಪ್ರಜ್ವಲ್ ಜರ್ಮನಿಯಲ್ಲಿರೋದರಿಂದ ಇಂದಿನ ತನಿಖೆಗೆ ಚಕ್ಕರ್ ಹೊಡೆಯುವ ಸಾಧ್ಯತೆ ಬಹಳಷ್ಟಿದೆ.ತನಿಖೆಗೆ ಸಹಕರಿಸದಿದ್ರೆ ಆರೋಪಿಗಳನ್ನು ಬಂಧಿಸುವ ಸಾಧ್ಯತೆಯಿದೆ.
ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅವರು ಅಮಾನಾತಾದ ಬೆನ್ನಲ್ಲೇ ತಂದೆ-ಮಗನ ವಿರುದ್ಧ ಎಸ್ ಐಟಿ ಸಮನ್ಸ್ ಜಾರಿ ಮಾಡಿದೆ. ಮನೆ ಕೆಲಸದವರು ನೀಡಿದ ದೂರಿನ ಮೇರೆಗೆ ಪ್ರಜ್ವಲ್ ಮತ್ತು ಅವರ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ದೂರಿನ ನಂತರ, ತಂದೆ-ಮಗನ ವಿರುದ್ಧ ಲೈಂಗಿಕ ಕಿರುಕುಳ, ಹಿಂಬಾಲಿಸುವುದು, ಬೆದರಿಕೆ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧದ ಎಫ್‌ಐಆರ್ ದಾಖಲಾಗಿದೆ.ಇದೀಗ ಇಬ್ಬರಿಗೂ ಎಸ್ ಐಟಿ ಸಮನ್ಸ್ ಜಾರಿ ಮಾಡಿದ್ದು ಪ್ರಜ್ವಲ್ ವಿಚಾರಣೆಗೆ ಹಾಜರಾಗ್ತಾರಾ ವಿದೇಶದಿಂದ ವಾಪಾಸಾಗ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.