ಬೆಂಗಳೂರು (ಮೇ 1): ಪ್ರಜ್ವಲ್ ರೇವಣ್ಣ, ವಿದೇಶ ಪ್ರವಾಸದಲ್ಲಿರುವುದರಿಂದ SIT ಹೇಳಿರುವ ದಿನಾ೦ಕಕ್ಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.ಅವರು ಬಂಧನಕ್ಕೆ ಹೆದರಿಲ್ಲ, ಹೀಗಾಗಿ ಜಾಮೀನಿಗೆ ಅರ್ಜಿಯನ್ನೂ ಹಾಕಿಲ್ಲ.ತಮ್ಮ ಮೇಲಿರುವ ಆರೋಪದ ಬಗ್ಗೆ ವಿಚಾರಣೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಕೀಲ ಅರುಣ್ , ನಮ್ಮ ಕಕ್ಷಿದಾರ (ಪ್ರಜ್ವಲ್ ರೇವಣ್ಣ)ರ ವಿನ೦ತಿಯ ಮೇರೆಗೆ ಎಸ್ಐಟಿ ತಂಡಕ್ಕೆ ಮನವಿ ಮಾಡಲಾಗಿದೆ. ಅವರ ಮನೆಗೆ CRPC 41(A) ಅಡಿ ನೊಟೀಸ್ ನೀಡಲಾಗಿತ್ತು. ಆದರೆ, ಈಗ ಅವರು ಬೆಂಗಳೂರಿನಲ್ಲಿ ಇರದ ಕಾರಣ , ಎಸ್ ಐ ಟಿ ವಿಚಾರಣೆಗೆ ಹಾಜರಾಗಲು ಇನ್ನೂ 7 ದಿನಗಳ ಕಾಲಾವಕಾಶ ಕೋರಿದ್ದೀವಿ. ಪ್ರಕರಣದ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೀವಿ ಎಂದು ಹೇಳಿದರು.