Wednesday, October 14, 2026
Homeಕ್ರೈಮ್108 Ambulence: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 108 ಅಂಬುಲೆನ್ಸ್ ನೌಕರರ ಮುಷ್ಕರ!

108 Ambulence: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 108 ಅಂಬುಲೆನ್ಸ್ ನೌಕರರ ಮುಷ್ಕರ!

Telegram Group
Join Now

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 108 ಅಂಬುಲೆನ್ಸ್ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇಂದು ರಾತ್ರಿಯಿಂದಲೇ ಅಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ಸೇವೆಗೆ ಹಾಜರಾಗದಿರಲು ನಿರ್ಧಾರ ಮಾಡಿದ್ದಾರೆ. ಇದೇ ತಿಂಗಳ 22ರಂದು ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.

ಕಳೆದೊಂದು ತಿಂಗಳಿಂದ ಸಭೆ ಮೇಲೆ ಸಭೆ ನಡೆಸಿದ್ರೂ ಬಗ್ಗದ ಸರ್ಕಾರದ ವಿರುದ್ಧ ಅಂಬುಲೆನ್ಸ್ ಸಿಬ್ಬಂದಿ ಸಿಡಿದಿದ್ದಾರೆ. ವಾರ್ಷಿಕವಾಗಿ ವೇತನ ಹೆಚ್ಚಳ ಆಗಬೇಕು. ಜೇಷ್ಠತೆ ಆಧಾರದ ಮೇಲೆ ವೇತನ ಹೆಚ್ಚಳ ಆಗಬೇಕು. ಅಪಘಾತದಲ್ಲಿ ಮೃತಪಟ್ಟವರಿಗೆ 50 ಲಕ್ಷ ಪರಿಹಾರ ಕೊಡಬೇಕು. ಹೀಗೆ ಹತ್ತು ಹಲವು ಬೇಡಿಕೆಗಳನ್ನ ಅಂಬುಲೆನ್ಸ್ ಸಿಬ್ಬಂದಿ ಸರ್ಕಾರದ ಮುಂದಿಟ್ಟಿದ್ದಾರೆ

ಆದರೆ 108 ಮುಷ್ಕರಕ್ಕೆ ಮಣಿಯಲ್ಲ ಅಂತಾ ಸಚಿವ ಖಾದರ್‌ ಎಚ್ಚರಿಸಿದ್ದಾರೆ. ಇನ್ನು ರಾಜ್ಯದಲ್ಲಿ 108 ಅಂಬುಲೆನ್ಸ್ ಸೇವೆಯನ್ನೇ ಬಡ ಜನರು ನೆಚ್ಚಿಕೊಂಡಿದ್ದಾರೆ. ಎರಡು ತಿಂಗಳು ಬೇರೆ ವ್ಯವಸ್ಥೆ ಮಾಡಿಕೊಳ್ಳಿ, ನಂತರ ವ್ಯವಸ್ಥೆ ಸರಿಪಡಿಸುತ್ತೇವೆ. ಹೊಸ ಅಂಬುಲೆನ್ಸ್ ಖರೀದಿಸುತ್ತಾ ಇದ್ದೇವೆ. ಹೊಸ ಪಾಲಿಸಿ ಮಾಡುತ್ತೇವೆ. ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸಿಗುವ ರೀತಿ ಮಾಡುತ್ತೇವೆ ಎಂದು ಖಾದರ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!