ಬೆಂಗಳೂರು (ಮೇ.2 ): ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ಐಟಿ ಅಧಿಕಾರಿಗಳು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಅಶ್ಲೀಲ ವಿಡಿಯೋಗಳಿಗೆ ಸಂಬಂಧ ಪಟ್ಟಂತೆ ಆರೋಪಿ ಪ್ರಜ್ವಲ್ ರೇವಣ್ಣ ಗೆ ಈಗ ಕಾನೂನು ಸಂಕಷ್ಟಗಳು ಹೆಚ್ಚಾಗುತ್ತಿದೆ.
ಜಗತ್ತಿನ ಎಲ್ಲ ಏರ್ಪೋರ್ಟ್ ಗಲ್ಲಿ ಪ್ರಜ್ವಲ್ ರೇವಣ್ಣ ಮೇಲೆ ನಿಗಾ ಇಡಲಾಗ್ತಿದೆ. ಏರ್ಪೋರ್ಟ್ ಹಾಗು ಇಂಟರ್ಪೋಲ್ ( ಅಂತರ್ ರಾಷ್ಟೀಯ ತನಿಖಾ ಸಂಸ್ಥೆ )ಗು SIT ಲುಕ್ ಔಟ್ ನೋಟೀಸ್ ರವಾನೆ ಮಾಡಿದೆ. ಯಾವುದೇ ಏರ್ಪೋರ್ಟ್ ನಲ್ಲಿ ಪ್ರಜ್ವಲ್ ಕಣ್ಣಿಗೆ ಬಿದ್ರು, ಅವರನ್ನ ವಶಕ್ಕೆ ಪಡೆಯಲು SIT ಸೂಚನೆ ನೀಡಿದೆ.
ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಲ್ಲಿರುವುದರ ಬಗ್ಗೆ ಈಗಾಗಲೇ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. SIT ನೀಡಿದ ಲುಕ್ ಔಟ್ ನೋಟೀಸ್ ಬಳಿಕವೂ ಪ್ರಜ್ವಲ್ ಪತ್ತೆಯಾಗದಿದ್ದರೆ, ಅವರ ಪತ್ತೆಗೆ ಜಾಮೀನು ರಹಿತ ವಾರಂಟ್ ಜಾರಿಯಾಗೋ ಸಾಧ್ಯತೆ ಇದೆ ಎನ್ನಲಾಗಿದೆ.