ಮೂಡಿಗೆರೆ : ತಾಲೂಕಿನ ಜನ್ನಾಪುರ ಗ್ರಾಮದ ಶಾಂತಿನಗರದಲ್ಲಿ ಶ್ರೀ ಭ್ರಮರಾಂಬಿಕ ಭಕ್ತ ಮಂಡಳಿ ವತಿಯಿಂದ ಪ್ರಥಮ ವರ್ಷದ ಶರನ್ನವರಾತ್ರಿ ದಸರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಹೌದು ನವರಾತ್ರಿಯ ವಿಶೇಷವಾಗಿ ಶ್ರೀ ದುರ್ಗಾಪರಮೇಶ್ವರಿಯನ್ನು ಶೈಲ ಪುತ್ರಿ ರೂಪದಲ್ಲಿ ವಿಗ್ರಹ ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತಿದ್ದುಸಮಿತಿಯಿಂದ ಗಣ ಹೋಮ, ಗಣಪತಿ ಹೋಮ, ದುರ್ಗಾ ಹೋಮ, ಭಕ್ತಾದಿಗಳಿಂದ ದುರ್ಗಾ ನಮಸ್ಕಾರ ಪೂಜೆ, ದೀಪೋತ್ಸವ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ದಿನಾಂಕ 20.10.2026ನೇ ಮಂಗಳವಾರ ಶ್ರೀ ಸನ್ನಿಧಿಯಲ್ಲಿ ಸಾಮೂಹಿಕ ಆಯುಧ ಪೂಜೆ ನಡೆಯಲಿದೆ ಮತ್ತು 21.10.2026 ನೇ ಬುಧವಾರ ಅಲಂಕರಿಸಲ್ಪಟ್ಟ ವಾಹನದಲ್ಲಿ ಶೋಭಾ ಯಾತ್ರೆಯ ಮೂಲಕ ಜನ್ನಾಪುರದಲ್ಲಿ ಮೆರವಣಿಗೆಯೊಂದಿಗೆ ತಾಯಿಯ ವಿಸರ್ಜನೆ ನಡೆಯಲಿದೆ. ಎಂದು ಸಮಿತಿ ತಿಳಿಸಿದ್ದು ಈ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ನವರಾತ್ರಿ ಉತ್ಸವವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಅದ್ದೂರಿಯಾಗಿ ನಡೆಸಲು ಸಹಕಾರ ಮತ್ತು ಪ್ರೋತ್ಸಾಹ ನೀಡುವಂತೆ ಶ್ರೀ ಭ್ರಮರಾಂಬಿಕ ಭಕ್ತ ಮಂಡಳಿ ಸಮಿತಿಯು ಮನವಿ ಮಾಡಿದೆ.
