ಮೂಡಿಗೆರೆ: ನವರಾತ್ರಿ ಉತ್ಸವದಲ್ಲಿ ಶಾಸಕಿ ನಯನಾ ಮೋಟಮ್ಮ ಅವರು ಮಹಿಳೆಯರಿಗೆ ಬಾಗೀನ ವಿತರಣೆನಮ್ಮ ನೆರವೇರಿಸಿದರು
ಬಳಿಕ ಮಾತನಾಡಿದ ಅವರು ಸಂಪ್ರದಾಯದಲ್ಲಿ ಬಾಗಿನಕ್ಕೆ ವಿಶೇಷವಾದ ಮಹತ್ವವಿದೆ. ಬಾಗಿನ ನೀಡುವುದು ಕೇವಲ ವಸ್ತುಗಳನ್ನು ಹಂಚುವುದಲ್ಲ. ಅದು ಪ್ರೀತಿ, ಗೌರವ, ಆತ್ಮೀಯತೆ ಮತ್ತು ಪರಸ್ಪರ ಸೌಹಾರ್ದವನ್ನು ಹಂಚಿಕೊಳ್ಳುವ ಸಂಕೇತವಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಸೋಮವಾರ ಸಂಜೆ ಪಟ್ಟಣದಲ್ಲಿ ನಡೆಯುತ್ತಿದ್ದ ನವರಾತ್ರಿ ಶ್ರೀ ದುರ್ಗಾದೇವಿ ಉತ್ಸವದಲ್ಲಿ ಮಹಿಳೆಯರಿಗೆ ಬಾಗೀನ ವಿತರಿಸಿ ಮಾತನಾಡಿದರು. ಮಹಿಳೆಯರು ಕುಟುಂಬದ ಆಧಾರಸ್ತಂಭಗಳಾಗಿದ್ದು, ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆ ಮುಂದಿನ ಪೀಳಿಗೆಗೂ ತಿಳಿಸುವ ಸಲುವಾಗಿ ಎಲ್ಲಾ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ಆಚರಿಸಬೇಕಾಗಿದೆ. ತಲತಲಾಂತರದಿAದಲೂ ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸಿದ್ದಾರೆ. ಮಹಿಳೆಯರ ಗೌರವ, ಸ್ವಾಭಿಮಾನ ಮತ್ತು ಸ್ವಾವಲಂಬನೆಗೆ ಹೆಚ್ಚಿನ ಆದ್ಯತೆ ಸಿಗುವಂತಾಗಬೇಕೆAದು ಹೇಳಿದರು.
ನವರಾತ್ರಿ ಹಬ್ಬವು ಶಕ್ತಿ, ಭಕ್ತಿ, ನಂಬಿಕೆ ಮತ್ತು ಮಹಿಳಾ ಶಕ್ತಿಯ ಆರಾಧನೆಯ ಪ್ರತೀಕವಾಗಿದೆ. ತಾಯಿ ದುರ್ಗಾದೇವಿಯ ಆಶೀರ್ವಾದದಿಂದ ಉತ್ತಮ ಮಳೆ ಬೆಳೆಯಾಗಿ, ಎಲ್ಲರೂ ಸಂತೋಷ ಹಾಗೂ ಆತ್ಮವಿಶ್ವಾಸದಿಂದ ಬದುಕುವ ಜತೆಗೆ ಪ್ರತಿಯೊಬ್ಬರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಆಶಿಸಿದರು.
ಮಾಜಿ ಸಚಿವೆ ಮೋಟಮ್ಮ, ದುರ್ಗಾ ದೇವಿ ಸಮಿತಿ ಕಾರ್ಯಾಧ್ಯಕ್ಷ ಮಂಚೇಗೌಡ, ನಿರ್ಮಲ ಮಂಚೇಗೌಡ, ಜಯಮ್ಮ, ಕೋಮಲಾ, ಜಾನಕಿ, ಕುನ್ನಳ್ಳಿ ರವಿ, ರಮೇಶ್ ಹೊಸ್ಕೆರೆ, ಸಿ.ಬಿ.ಶಂಕರ್, ಸುಧೀರ್ ಚಕ್ರಮಣಿ, ನಿಶಾಂತ್ ಪಟೇಲ್ ಮತ್ತಿತರರಿದ್ದರು
