Sunday, October 25, 2026
Homeಜಿಲ್ಲಾಸುದ್ದಿಬಣಕಲ್‌ನಲ್ಲಿ ಆರು ಮಸೀದಿಗಳ ಸಹಯೋಗದಲ್ಲಿ ಈದ್ ಮಿಲಾದ್ ಆಚರಣೆ: ಪ್ರವಾದಿಯ ಜೀವನ ಸಂದೇಶ ಅನುಸರಿಸಿ ಮಾನವೀಯತೆ...

ಬಣಕಲ್‌ನಲ್ಲಿ ಆರು ಮಸೀದಿಗಳ ಸಹಯೋಗದಲ್ಲಿ ಈದ್ ಮಿಲಾದ್ ಆಚರಣೆ: ಪ್ರವಾದಿಯ ಜೀವನ ಸಂದೇಶ ಅನುಸರಿಸಿ ಮಾನವೀಯತೆ ಬೆಳೆಸಿಕೊಳ್ಳಿ!

Telegram Group
Join Now

ಕೊಟ್ಟಿಗೆಹಾರ: ಪ್ರೀತಿ, ಸಹನೆ, ದಾನಧರ್ಮ ಹಾಗೂ ಪರಸ್ಪರ ಗೌರವದ ಮೂಲಕ ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸಬೇಕು ಎಂಬುದು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ ಸಂದೇಶವಾಗಿದೆ ಎಂದು ಚಕ್ಕಮಕ್ಕಿಯ ಖಲಂದರಿಯ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಸಿನಾನ್ ಫೈಝಿ ಹೇಳಿದರು.

ಬಣಕಲ್ ಹೋಬಳಿ ಮೀಲಾದ್ ಟ್ರಸ್ಟ್ ವತಿಯಿಂದ ಹೋಬಳಿಯ ಆರು ಮಸೀದಿಗಳ ಸಹಯೋಗದಲ್ಲಿ ಶನಿವಾರ ಬಣಕಲ್ ಈದ್ಗಾ ಮೈದಾನದಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರವಾದಿಯವರ ಜೀವನವು ಜಗತ್ತಿನ ಜನರಿಗೆ ಮಾದರಿಯಾಗಿದೆ. ಎಲ್ಲ ಧರ್ಮದವರನ್ನು ಗೌರವಿಸುವುದು, ಜಾತಿ ಮತ್ತು ವರ್ಣದ ಆಧಾರದಲ್ಲಿ ಭೇದಭಾವ ಮಾಡದಿರುವುದು ಹಾಗೂ ಪರಸ್ಪರ ಪ್ರೀತಿಯಿಂದ ಬದುಕುವುದು ಅವರ ಜೀವನದ ಪ್ರಮುಖ ಆದರ್ಶಗಳಾಗಿವೆ. ಈ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಶಾಂತಿಯುತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮೂಡಿಗೆರೆ ಪಟ್ಟಣದ ಜದೀದ್ ಜುಮ್ಮಾ ಮಸೀದಿಯ ಧರ್ಮಗುರು ಮೌಲಾನ ವಾಜಿದ್ ಮಾತನಾಡಿ, ನಮಾಜ್ ನಿರ್ವಹಿಸುವುದರ ಜೊತೆಗೆ ಬಡವರಿಗೆ ದಾನ ಮಾಡುವುದು, ನಿರ್ಗತಿಕರಿಗೆ ನೆರವಾಗುವುದು ಹಾಗೂ ಯಾರೊಂದಿಗೂ ದ್ವೇಷ ಬೆಳೆಸದೆ ಉತ್ತಮ ಬಾಂಧವ್ಯ ಹೊಂದುವುದು ಪ್ರವಾದಿಯವರು ಬೋಧಿಸಿದ ಪ್ರಮುಖ ಮೌಲ್ಯಗಳಾಗಿವೆ ಎಂದರು.

ತಮ್ಮ ಸಂಪತ್ತಿನ ಒಂದು ಭಾಗವನ್ನು ಬಡವರ ನೆರವಿಗೆ ಮೀಸಲಿಡಬೇಕು. ಪರಸ್ಪರ ಸಹಕಾರ ಮತ್ತು ಮಾನವೀಯತೆಯಿಂದ ಬದುಕಿದಾಗ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ಹೇಳಿದರು.
ಇದಕ್ಕೂ ಮುನ್ನ ಚಕ್ಕಮಕ್ಕಿಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಆವರಣದಿಂದ ಬಣಕಲ್ ಪಟ್ಟಣದವರೆಗೆ ಮೆರವಣಿಗೆ ನಡೆಯಿತು. ನಂತರ ಈದ್ಗಾ ಮೈದಾನದಲ್ಲಿ ಮೌಲಿದ್ ಪಾರಾಯಣ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.

ಬಣಕಲ್ ಜುಮ್ಮಾ ಮಸೀದಿಯ ಧರ್ಮಗುರು ಮಹಮ್ಮದ್ ಶಾಕಿರ್ ರಝಾ, ಬದ್ರುದ್ದೀನ್ ದಾರಿಮಿ, ಸಫ್ವಾನ್ ಫೈಝಿ, ಬಣಕಲ್ ಮೀಲಾದ್ ಟ್ರಸ್ಟ್ ಅಧ್ಯಕ್ಷ ಜಾಕೀರ್ ಹುಸೇನ್, ಹಸನ್ ಹಾಜಿ, ಫಾರೂಕ್, ಕೊಟ್ಟಿಗೆಹಾರ ಸಿದ್ದಿಕ್, ನಜೀರ್, ಜಾಕೀರ್ ಅಲಿ ಖಾನ್, ಸಿದ್ದೀಕ್ ಹಳಿಕೆ, ಬಾಬರ್, ಮುನಾಫ್ ಸಾಬ್, ಅನೀಸ್, ರಫೀಕ್, ಅಕ್ಬರಾಲಿ, ಹಂಝ, ಶಂಸುದ್ದೀನ್, ಅಸ್ಗರ್ , ಅಲಿ ಹಾಜಿ, ಮುಂತಾಜ್, ಯಾಕೂಬ್ ಚಕ್ಕಮಕ್ಕಿ,
ಅಯ್ಯುಬ್ ಹಾಜಿ, ಮೊಹಮ್ಮದ್ ಆಲಿ,ಶೇಕ್ ಸಿರಾಜ್,
ಸೇರಿದಂತೆ ಹಲವರು ಭಾಗವಹಿಸಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!