Sunday, October 25, 2026
Homeಜಿಲ್ಲಾಸುದ್ದಿಎಲ್ಲಾ ಜನಾಂಗಗಳ ಅಭಿವೃದ್ಧಿಗೆ ಒತ್ತು ನೀಡಿ ತಾಲೂಕನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತಿದ್ದೇನೆ: ನಯನಾ ಮೋಟಮ್ಮ

ಎಲ್ಲಾ ಜನಾಂಗಗಳ ಅಭಿವೃದ್ಧಿಗೆ ಒತ್ತು ನೀಡಿ ತಾಲೂಕನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತಿದ್ದೇನೆ: ನಯನಾ ಮೋಟಮ್ಮ

Telegram Group
Join Now

ಮೂಡಿಗೆರೆ:‎ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಐಎಎಸ್, ಕೆಎಎಸ್, ವೈದ್ಯರು ಸೇರಿದಂತೆ ಉನ್ನತ ಹುದ್ದೆಗಳಿಗೆ ಏರಿಸುವ ಹಾಗೂ ಉದ್ಯಮಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಇಂದಿನಿಂದಲೇ ಪಣ ತೊಡಬೇಕೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

‎‎ಪಟ್ಟಣದ ಗಂಗನಮಕ್ಕಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‎‎ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಬಾರದೆಂಬ ಕಾರಣಕ್ಕೆ ಶಾಸಕಿಯಾಗಿ ಕೆಲವೊಂದು ಕಠಿಣ ನಿರ್ಧಾ ರಗಳನ್ನು ಕೈಗೊಂಡು ಕೆಲಸ ಮಾಡುತ್ತಿದ್ದೇನೆ. ಇದರಿಂದ ಎಷ್ಟೇ ಟೀಕೆಗಳು ಬಂದರೂ ಅವುಗಳನ್ನು ಸ್ವೀಕರಿಸಿ, ತಾರತಮ್ಯ ಮಾಡದೆ ಎಲ್ಲ ಜನಾಂಗಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜತೆಗೆ ತಾಲೂಕನ್ನು ಮಾದರಿ ಕ್ಷೇತ್ರ ವನ್ನಾಗಿ ಮಾಡಲು ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.

‎‎ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಸಂಘ ಸುವರ್ಣ ಮಹೋತ್ಸವ ಆಚರಿಸಿ ಕೊಂಡು ಬಂದಿದೆ ಎಂದರೆ ಅದರ ಹಿಂದೆ ಹಿರಿಯರ ಶ್ರಮವಿದೆ ಎಂಬುದನ್ನು ಅರಿತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸಮಾಜವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊ ಯ್ಯಲು ಹಾಗೂ ಅಭಿವೃದ್ಧಿ ಹೊಂದಲು ಎಲ್ಲರೂ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮ ಉದ್ದೇಶಿಸಿ ‎‎ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್,ಹಾಗೂ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾ ಧಿಕಾರಿ ಆರ್. ಪದ್ಮರಾಜ್, ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ವೇದಕುಮಾ‌ರ್ ಮಾತನಾಡಿದರು.

ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಂಸದ ಕೋಟ
‎ಶ್ರೀನಿವಾಸ ಪೂಜಾರಿ, ಸಮಾಜ ಕಟ್ಟುವಂತಹ ಉನ್ನತ ಮಟ್ಟದಲ್ಲಿ ನಮ್ಮ ಸಮಾಜದ ಜನರು ಬೆಳೆದು ನಿಂತಿರುವುದು ಶ್ಲಾಘನೀಯ ಎಂದರು. ಸಮಾಜ ಇಂದು ತನ್ನಷ್ಟಕ್ಕೆ ತಾನೇ ಸಂಘಟಿತವಾಗಿ, ಸಾಮಾಜಿಕವಾಗಿ ತನ್ನ ಕಾಲ ಮೇಲೆ ನಿಲ್ಲುವ ಶಕ್ತಿ ಪಡೆದುಕೊಂಡಿದೆ. ಬಂಗಾರಪ್ಪ, ಜನಾರ್ದನ ಪೂಜಾರಿ, ಜಾನಪ್ಪ, ಕಾಗೋಡು ತಿಮ್ಮಪ್ಪ ಸೇರಿದಂತೆ ಅನೇಕರು ಸಮಾಜದ ಪ್ರತಿನಿಧಿಗಳಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದನ್ನು ಕಾಣುತ್ತಿದ್ದೇವೆ.

‎‎ಇದೇ ರೀತಿ ಪ್ರತಿಯೊಂದು ಕುಟುಂಬವೂ ಉನ್ನತವಾಗಿ ಬೆಳೆಯಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

‎‎ಇದಕ್ಕೂ ಮೊದಲು ಪಟ್ಟಣದ ಪ್ರವಾಸಿ ಮಂದಿರ ದಿಂದ ಗಂಗನಮಕ್ಕಿವರೆಗೆ ವಿವಿಧ ಕಲಾತಂಡ ಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

‎ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಮನೋಜ್ ಕುಮಾರ್ ಬಾಳೂರುವಹಿಸಿದ್ದರು. ಸುರೇಶ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ದಯಾನಂದ್, ಯೋಗೇಶ್ ಪೂಜಾರಿ, ಸದಾನಂದ ಪೂಜಾರಿ, ಸತೀಶ್, ದೀಪಕ್ ದೊಡ್ಡಯ್ಯ, ಪೃಥ್ವಿ ಸಾಗರ್, ಕೇಶವ ಸುವರ್ಣ, ಎಂ.ಜಿ. ನಾಗರತ್ನ, ಗಂಗಮ್ಮ, ಗಣೇಶ್ ಪೂಜಾರಿ, ಲಕ್ಷ್ಮಣ್ ಪೂಜಾರಿ, ಸುಂದರ್ ಪೂಜಾರಿ, ಭರತ್ ಪೂಜಾರಿ, ಯಶೋಧಾ ರತ್ನಾಕರ, ರೂಪಾ ಅಶೋಕ್, ರೇವತಿ ನೀಲಯ್ಯ ಸೇರಿದಂತೆ ಆನೇಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!