ಚಿಕ್ಕಮಗಳೂರು : ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ತೇಗೂರು ಗ್ರಾಮದಲ್ಲಿ ನಡೆದಿದೆ. ಆದರೆ ಮಾಂಜಾ ದಾರದ ರೀತಿಯಲ್ಲಿ ಅವಘಡ ನಡೆದಿದೆ ಎನ್ನಲಾಗಿದೆ.
ಟ್ರಾಕ್ಟರ್ ಗೆ ಟಿಂಬರ್ ಮರಗಳನ್ನ ಎಳೆದು ಲೋಡ್ ಮಾಡಲು ಕಟ್ಟಲಾಗಿದ್ದ ಹಗ್ಗ ಈ ವೇಳೆ ಹೆಂಡತಿ ಜೊತೆ ಸ್ಕೂಟರ್ ನಲ್ಲಿ ಬರುವಾಗ ಹಗ್ಗ ಸಿಲುಕಿ ಮಹಮ್ಮದ್ ಗೌಸ್ ಖಾನ್ (36 ) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ನಗರದ ಸೈಯದ್ ಗಲ್ಲಿ ನಿವಾಸಿಯಾಗಿದ್ದು ತೇಗೂರು ಗ್ರಾಮದಿಂದ ಚಿಕ್ಕಮಗಳೂರು ನಗರಕ್ಕೆ ಬರುವಾಗ ಈ ದುರ್ಘಘಟನೆ ಸಂಭವಿಸಿದ್ದು ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ಕಾಣದೆ ಕುತ್ತಿಗೆಗೆ ಸಿಲುಕಿ ಮೃತ್ಯಗೀಡಾಗಿದಾರೆ
ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
