ಬೆಂಗಳೂರು; ಪ್ರಜ್ವಲ್ ರೇವಣ್ಣ ಕೇಸಿಗೆ ಸಂಬಂಧಿಸಿದಂತೆ ನಿಖಿಲ್ ಕುಮಾರಸ್ವಾಮಿ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ನನಗೆ ಪ್ರಜ್ವಲ್‌ಗೆ ಹೆಚ್ಚಿನ ಸಂಪರ್ಕ ಇಲ್ಲ. ನಾನು ಹಾಸನ ಜಿಲ್ಲೆಗೆ ಹೆಚ್ಚಾಗಿ ಕಾಲೇ ಇಟ್ಟಿಲ್ಲ ಎನ್ನುವ ಮೂಲಕ ಅವರಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದಾರೆ.
ಇನ್ನು ಮೊನ್ನೆ ನಮ್ಮ ಕುಟುಂಬ ಅಂದ್ರೆ ದೇವೇಗೌಡರು-ನನ್ನ ಕುಟುಂಬ ಮಾತ್ರ ಎಂದು ಹೆಚ್ಡಿಕೆ ಹೇಳಿಕೆ ನೀಡಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿ ಕೂಡ ಅದೇ ರೀತಿ ಹೇಳಿದ್ದಾರೆ. ನನಗೂ ಪ್ರಜ್ವಲ್ ಗೂ ಹೆಚ್ಚಿನ ಸಂಪರ್ಕ ಇಲ್ಲ ಎಂದಿದ್ದಾರೆ.ವಿಡಿಯೋ ನೋಡೋಕೆ ನಾನು ಧೈರ್ಯ ಮಾಡ್ಲಿಲ್ಲ.ನಮ್ಮ ಅಜ್ಜಿ, ನಮ್ಮ ತಾತ ತುಂಬಾ ನೋವಲ್ಲಿದ್ದಾರೆ.ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದಿದ್ದಾರೆ.
ಅಲ್ಲದೇ ವಿಡಿಯೋ ಬ್ಲರ್ ಮಾಡದೇ ರಿವೀಲ್ ಮಾಡಿದ್ದು ಸರಿಯಲ್ಲ.ಪಾಪ ಆ ಹೆಣ್ಣು ಮಕ್ಕಳ ಮುಖ ಓಪನ್ ಆಗಿ ತೋರ್ಸಿದಾರೆ.ಇದು ನಿಜಕ್ಕೂ ಬೇಜಾರ್ ಆಗುತ್ತೆ, ಅದ್ರ ಬಗ್ಗೆನೂ ತನಿಖೆ ಆಗಬೇಕು ಎಂದಿದ್ದಾರೆ.