Tuesday, November 10, 2026
Homeಕ್ರೈಮ್Chickmagalore: ದೀಪಾವಳಿ ಹಬ್ಬದಂದು ಘೋರ ದುರಂತ: ಮಣ್ಣಿನಗುಡ್ಡೆಗೆ ಬೈಕ್ ಡಿಕ್ಕಿ, ಮಗಳು ಸಾವು, ತಂದೆ...

Chickmagalore: ದೀಪಾವಳಿ ಹಬ್ಬದಂದು ಘೋರ ದುರಂತ: ಮಣ್ಣಿನಗುಡ್ಡೆಗೆ ಬೈಕ್ ಡಿಕ್ಕಿ, ಮಗಳು ಸಾವು, ತಂದೆ ಸ್ಥಿತಿ ಗಂಭೀರ

Telegram Group
Join Now

ಚಿಕ್ಕಮಗಳೂರು : ಮಣ್ಣಿನಗುಡ್ಡೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ  ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು ತಂದೆ ಸ್ಥಿತಿ ಗಂಭೀರವಾಗಿರುವ ಘಟನೆ ತರೀಕೆರೆ‌ ತಾಲೂಕಿನ ಭೈರಾಪುರ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದ್ದು ದೀಪಾವಳಿ ಹಬ್ಬದ ಸಂತೋಷ ಕುಟುಂಬಕ್ಕೆ ಮರ್ಮಾಘಾತವಾಗಿದೆ.

ಹೌದಿ .. ದ್ರಾಕ್ಷಾಯಿಣಿ (20) ಮೃತ ದುರ್ದೈವಿ, ತಂದೆ ರಮೇಶ್ ಸ್ಥಿತಿ ಗಂಭೀರವಾಗಿದೆ. ಸಂಬಂಧಿ ಮನೆಗೆ ದೀಪಾವಳಿ ಹಬ್ಬಕ್ಕೆ ತಂದೆ-ಮಗಳು ಬೈಕ್ ನಲ್ಲಿ ತೆರಳುವಾಗ ನಿಯಂತ್ರಣ ತಪ್ಪಿ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೊಡೆದ ಬೈಕ್ ಪರಿಣಾಮ ಪುತ್ರಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇವರು ಲಿಂಗದಹಳ್ಳಿ ಸಮೀಪದ ಶಾಂತಿನಗರ ನಿವಾಸಿಗಳು

ಶಾಂತಿನಗರದಿಂದ  ಎಂ.ಸಿ.ಹಳ್ಳಿ ಗ್ರಾಮದಲ್ಲಿದ್ದ ಚಿಕ್ಕಮ್ಮನ ಮಗಳ ಮನೆಗೆ ತೆರಳುತ್ತಿದ್ದ ‌ವೇಳೆ ಈ ದುರಂತ ಸಂಭವಿಸಿದೆ. ರಮೇಶ್ ಸ್ಥಿತಿ ಗಂಭೀರವಾಗಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಬಂಧ ಲಿಂಗದಹಳ್ಳಿ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!