Tuesday, November 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಆಡಳಿತ ವ್ಯವಸ್ಥೆ ಇದೆಯೇ? ಅಥವಾ ರೋಗಿಗಳೇ ಕಾಯಬೇಕೇ?: ಮಾಜಿ ಗ್ರಾ.ಪಂ. ಸದಸ್ಯ ವಿನೋದ್‌...

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಆಡಳಿತ ವ್ಯವಸ್ಥೆ ಇದೆಯೇ? ಅಥವಾ ರೋಗಿಗಳೇ ಕಾಯಬೇಕೇ?: ಮಾಜಿ ಗ್ರಾ.ಪಂ. ಸದಸ್ಯ ವಿನೋದ್‌ ಬೊಗಸೆ ಕಿಡಿ!

Telegram Group
Join Now

ಚಿಕ್ಕಮಗಳೂರು : ಜಿಲ್ಲಾಸ್ಪತ್ರೆಯಲ್ಲಿ ಆಡಳಿತ ವ್ಯವಸ್ಥೆ ಇದೆಯೇ? ಅಥವಾ ರೋಗಿಗಳೇ ಕಾಯಬೇಕೇ?
ಇಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಶ್ವಾಸಕೋಶ ತಜ್ಞರಾದ ಡಾ. ದೀಪಕ್ ಯು.ಜಿ. ಅವರು ತಮ್ಮ ಕರ್ತವ್ಯದ ಸ್ಥಳದಲ್ಲಿ ಇಲ್ಲದ ಕಾರಣ ಹತ್ತಾರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗಳು ವೈದ್ಯರಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಮಾಜಿ ಗ್ರಾ.ಪಂ.ಸದಸ್ಯರಾದ ವಿನೋದ್‌ ಬೊಗಸೆ ಆರೋಪಿಸಿದ್ದಾರೆ.

ಈ ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳನ್ನ ವಿಚಾರಿಸಿದಾಗ ಸಿಬ್ಬಂದಿ ಬೆಳಿಗ್ಗೆಯಿಂದ ಮಧ್ಯಾಹ್ನ 2:30ರ ತನಕ ವೈದ್ಯರು ಬರುತ್ತಾರೆ ಎಂದು ರೋಗಿಗಳನ್ನು ಕಾಯಿಸುತ್ತಿರುವುದು ತಿಳಿದುಬಂತು. ಈ ಬಗ್ಗೆ ಡೀನ್ ಅವರನ್ನು ಪ್ರಶ್ನಿಸಿದಾಗ ವೈದ್ಯರು ಹಾಸ್ಟೆಲ್‌ಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ನೀಡಿದರು. ಆದರೆ ವೈದ್ಯರಿಗೆ ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಅವರು ಆಸ್ಪತ್ರೆಗೆ ಬಂದಾಗ, ಇಂದು ನಾನು ರಜೆಯಲ್ಲಿದ್ದೇನೆ ಎಂದು ತಿಳಿಸಿದರು.

ವೈದ್ಯರಿಗೆ ರಜೆ ಇದ್ದರೆ ಅದನ್ನು ಮೊದಲೇ ರೋಗಿಗಳಿಗೆ ತಿಳಿಸುವ ವ್ಯವಸ್ಥೆ ಇರಬೇಕಲ್ಲವೇ? ಬದಲಿ ವೈದ್ಯರ ವ್ಯವಸ್ಥೆ ಮಾಡಬೇಕಲ್ಲವೇ? ಎಂದು ಪ್ರಶ್ನಿಸಿದಾಗ, ಮಾಹಿತಿ ನೀಡಲು ಡಿ ಗ್ರೂಪ್ ನೌಕರರೇ ಇಲ್ಲ ಎಂಬ ಉತ್ತರ ಸಿಗುತ್ತದೆ.

ಒಂದೆಡೆ ಡೀನ್ ಅವರಿಗೆ ವೈದ್ಯರು ಹಾಸ್ಟೆಲ್‌ಗೆ ಹೋಗಿದ್ದಾರೆ ಎಂಬ ಮಾಹಿತಿ, ಮತ್ತೊಂದೆಡೆ ವೈದ್ಯರು ತಾವು ರಜೆಯಲ್ಲಿದ್ದೇನೆ ಎಂಬ ಹೇಳಿಕೆ. ಹಾಗಾದರೆ ಜಿಲ್ಲಾಸ್ಪತ್ರೆಯ ಆಡಳಿತ ವ್ಯವಸ್ಥೆಯಲ್ಲಿ ಸಮನ್ವಯ ಎಲ್ಲಿದೆ? ರೋಗಿಗಳಿಗೆ ಸರಿಯಾದ ಮಾಹಿತಿ ನೀಡುವ ಜವಾಬ್ದಾರಿ ಯಾರದ್ದು?
ಸರ್ಕಾರಿ ಆಸ್ಪತ್ರೆಗಳಿಗೆ ಬರುವವರು ಹೆಚ್ಚಾಗಿ ಬಡ ಮತ್ತು ಮಧ್ಯಮ ವರ್ಗದ ಜನರು. ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ಅವರು ಚಿಕಿತ್ಸೆಗಾಗಿ ಗಂಟೆಗಟ್ಟಲೆ ವೈದ್ಯರ ಬಾಗಿಲು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ನಿಜಕ್ಕೂ ದುರದೃಷ್ಟಕರ.

ವೈದ್ಯರಿಗೆ ರಜೆ ಬೇಕೆಂದರೆ ತಪ್ಪಿಲ್ಲ. ಆದರೆ ರೋಗಿಗಳಿಗೆ ತೊಂದರೆಯಾಗದಂತೆ ಬದಲಿ ವೈದ್ಯರ ವ್ಯವಸ್ಥೆ ಮಾಡುವುದು ಆಸ್ಪತ್ರೆಯ ಆಡಳಿತದ ಜವಾಬ್ದಾರಿಯಲ್ಲವೇ? ವೈದ್ಯರ ಗೈರುಹಾಜರಿಗಿಂತಲೂ ಅದನ್ನು ನಿರ್ವಹಿಸಲು ವಿಫಲವಾಗಿರುವ ಆಡಳಿತ ವ್ಯವಸ್ಥೆಯೇ ಇಲ್ಲಿ ಹೆಚ್ಚು ಪ್ರಶ್ನಾರ್ಹವಾಗಿದೆ.
ಜಿಲ್ಲಾಸ್ಪತ್ರೆ ಎಂದರೆ ಬಡ ರೋಗಿಗಳಿಗೆ ಆಸರೆಯಾಗಬೇಕೇ ಹೊರತು, ವೈದ್ಯರಿಗಾಗಿ ಕಾಯುವ ತಾಣವಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!