ಬೆಂಗಳೂರು; ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣಗೆ ಎಸ್ ಐ ಟಿ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಲುಕ್ ನೋಟಿಸ್ ಕೂಡ ಜಾರಿ ಮಾಡಿದೆ. ಪ್ರಕರಣ ಬಹಿರಂಗವಾಗುತ್ತಿದ್ದಂತೆ ಪ್ರಜ್ವಲ್ ಜರ್ಮನಿಗೆ ತೆರಳಿದ್ದರು. ಬಳಿಕ ಅಲ್ಲಿಂದ ದುಬೈಗೆ ತೆರಳಿದ್ದಾರೆ. ಇದೀಗ ಪ್ರಜ್ವಲ್ ದುಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದು ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರಂತೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವೈಯಕ್ತಿಕ ಜೀವನಕ್ಕೆ ಕುರಿತಾದ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಯಾರೊಂದಿಗೂ ಸಂಪರ್ಕದಲ್ಲಿಲ್ಲದ ಪ್ರಜ್ವಲ್ ರೇವಣ್ಣ ಒಂದು ನಂಬರ್‌ಗೆ ಮಾತ್ರ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅದು ಬೇರಾರ ನಂಬರ್ ಕೂಡ ಅಲ್ಲ. ಪ್ರಜ್ವಲ್ ಕರೆ ಮಾಡುತ್ತಿರುವುದು ತಾನೂ ಮದುವೆ ಆಗಬೇಕು ಅಂದುಕೊಂಡಿದ್ದ ಯುವತಿದ್ದು ಎನ್ನಲಾಗಿದೆ.
ಇನ್ನು ಇದೇ ತಿಂಗಳಲ್ಲಿ ಪ್ರಜ್ವಲ್ ಆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡ್ಕೋಬೇಕು ಎಂದು ಪ್ರಜ್ವಲ್ ಅಂದುಕೊಂಡಿದ್ದರಂತೆ, ಆ ಹುಡುಗಿಗೆ ದಿನಕ್ಕೆರಡು ಬಾರಿ ಫೋನ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಮಾಹಿತಿ ತಿಳಿದಕೂಡಲೇ ಎಸ್‌ಐಟಿ ಆ ಯುವತಿಯ ಚಲನವಲನಗಳ ಮೇಲೆ ನಿಗಾ ವಹಿಸಿದೆ ಎನ್ನಲಾಗಿದೆ.