
ಚಿಕ್ಕಮಗಳೂರು: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಕರಗುಂದ ಸಮೀಪ ನಡೆದಿದೆ. ಸುನೀಲ್, ಉಮೇಶ್ ಮೃತ ದುರ್ದೈವಿಗಳು. ಸುನೀಲ್, ಕಳಸ ತಾಲೂಕಿನ ಮುಂಡಗದ ಮನೆಯವರಾಗಿದ್ದು, ಉಮೇಶ್ ಶಿವಮೊಗ್ಗದವರು. ಇಬ್ಬರು ಹೊರನಾಡಿನ ಭದ್ರಾ ನಿವಾಸದಲ್ಲಿ ಕೆಲಸ ಮಾಡ್ತಿದ್ದು, ಉಮೇಶ್ ರನ್ನ ಶಿವಮೊಗ್ಗಕ್ಕೆ ಬಿಡಲು ಸುನೀಲ್ ಬೈಕ್ ನಲ್ಲಿ ಕರೆದುಕೊಂಡು ಹೋಗ್ತಿದ್ರು ಅನ್ನೋ ಮಾಹಿತಿ ಪಬ್ಲಿಕ್ ಇಂಪ್ಯಾಕ್ಟ್ ಗೆ ಲಭ್ಯವಾಗಿದೆ. ಅತಿವೇಗದಲ್ಲಿ ಬೈಕ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವಾಗಿರಬಹುದು ಅಂತಾ ಹೇಳಲಾಗ್ತಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎನ್.ಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
